ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕಾರ್ಮಿಕರಿಗೆ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗರಮುನ್ನೋಳಿ (ಬೆಳಗಾವಿ ಜಿಲ್ಲೆ): ‘ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಹಾಯವಾಗಲೆಂದು ದಿನಸಿ ಕಿಟ್ ನೀಡುವ ಮೂಲಕ ಕಣ್ಣೀರು ಒರೆಸಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಗ್ರಾಮದಲ್ಲಿ ನಿರ್ಮಾಣ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ತುಂಬಾ ಕೆಲಸ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೌಲಭ್ಯಗಳ ಮೂಲಕ ಕೊರೊನಾ ಯೋಧರನ್ನು ಗೌರವಿಸಿದ್ದಾರೆ’ ಎಂದರು.

ಮುಖಂಡರಾದ ಸುರೇಶ ಬೆಲ್ಲದ, ವಿ.ಬಿ. ಈಟಿ, ಲಕ್ಷ್ಮಣ ಪೂಜೇರಿ, ಎಂ.ಬಿ. ಆಲೂರೆ, ನಿಜಾಂ ಫೆಂಡಾರಿ, ಎಂ.ಎಸ್. ಈಟಿ, ರಮೇಶ ಕಾಳನ್ನವರ, ಅರುಣ ಮರ‍್ಯಾಯಿ, ಮುರಿಗೆಪ್ಪ ಅಡಿಶೇರಿ, ಧನಪಾಲ ಭೀಮನಾಯ್ಕ, ಬಸಲಿಂಗ ಕಾಡೇಶಗೋಳ, ಮಹಾದೇವ ಜೂನಿ, ಮಲ್ಲಪ್ಪಾ ಟೋಣಪೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು