ಬುಧವಾರ, ಅಕ್ಟೋಬರ್ 28, 2020
23 °C

ಬೆಳಗಾವಿ: ಭತ್ತದೊಂದಿಗೆ ಮುಳುಗಿದ ಬದುಕು

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಜಾಂಬೋಟಿ ಮತ್ತು ಗುಂಜಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

ಸಾವರಗಾಳಿ, ಸಂಗರಗಾಳಿ, ಗುಂಜಿ, ಶಿರೋಲಿ, ನೇರಸಾ, ಗಂಗವಾಳಿ, ಹರೂರಿ, ತಿವೋಲಿ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಭತ್ತದ ಗದ್ದೆಗಳು ಜಲಾವೃತವಾಗಿದೆ. ಜೂನ್‌ನಲ್ಲಿ ಬಿತ್ತನೆಯಾಗಿದ್ದ ಭತ್ತ ಆಗಸ್ಟ್‌ ಮಧ್ಯ ಭಾಗದಲ್ಲಿ ಸುರಿದ ಜಡಿ ಮಳೆಯಿಂದಾಗಿ ತೊಂದರೆಗೀಡಾಗಿತ್ತು. ನಂತರ ಬಿಸಿಲು ಬಿದ್ದಿದ್ದರಿಂದ ಪೈರುಗಳು ಸುಧಾರಣೆ ಕಂಡಿದ್ದವು. ಆದರೆ ಈಗ ಮತ್ತೆ ಮಳೆ ಕಾಡಿದೆ. ಪರಿಣಾಮ ತೆನೆ ಕಟ್ಟುವ ಹಂತದಲ್ಲಿರುವ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ಹೇಳುತ್ತಾರೆ.

***

ಹಂಗಾಮಿನಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ನಮಗೆ ಮತ್ತೆ ವರುಣಾರ್ಭಟದಿಂದ ಹಾನಿ ಭೀತಿ ಎದುರಾಗಿದೆ. ತಾಲ್ಲೂಕಿನ ಪ್ರಮುಖ ಬೆಳೆಯಾದ ಭತ್ತಕ್ಕೆ ರೋಗ ಬಾಧೆಯಿಂದ ತೊಂದರೆ ಆಗಲಿದೆ

-ಮಹಾಂತೇಶ ರಾಹೂತ, ರೈತ, ನಂದಗಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು