ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು: ಕೆರೆ ಒಡೆದು ಬೆಳೆ ನಾಶ

Last Updated 7 ಆಗಸ್ಟ್ 2019, 14:42 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದ 14 ಎಕರೆ ವಿಸ್ತೀರ್ಣದ ಸಣ್ಣ ಕೆರೆ ನೀರಿನ ಪ್ರವಾಹಕ್ಕೆ ಒಡೆದು ಭೀಕರ ಹಾನಿಯಾಗಿದೆ.

ರೈತರ ಕಬ್ಬು, ಭತ್ತ, ಗೋವಿನಜೋಳ ಸೇರಿದಂತೆ ವಿವಿಧ 150 ಎಕರೆ ಬೆಳೆ ಸಂಪೂರ್ಣ ನಾಶವಾಗಿದೆ. ಅಲ್ಲದೇ ದನ–ಕರುಗಳು ನೀರಿನಲ್ಲಿ ಸಿಲುಕಿ ಯಾತನೆ ಅನುಭವಿಸುತ್ತಿವೆ. ರೈತರು ತೀವ್ರ ಆತಂಕಗೊಂಡಿದ್ದಾರೆ. ಹೂಲಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳು ಕೊಚ್ಚಿ ಹೋಗಿವೆ. ಗ್ರಾಮಸ್ಥರು ಪರದಾಡು ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಖೋದಾನಪುರ ಗ್ರಾಮದಲ್ಲಿ ಮಳೆಯ ರುದ್ರಾವತಾರಕ್ಕೆ 30ಕ್ಕೂ ಹೆಚ್ಚೂ ಮನೆಗಳು ಭಾಗಶಃ ಕುಸಿದಿವೆ. ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಗ್ರಾಮಸ್ಥರು ಆಂತಕದಲ್ಲಿ ಜೀವ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಕಿತ್ತೂರಿನಿಂದ ಅಳ್ನಾವರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪರ್ಕ ಕಂಡಿತಗೊಂಡಿದೆ. ಸಮೀಪದ ಪರಸನಟ್ಟಿ ಕೆರೆ ತುಂಬಿದ ಪರಿಣಾಮ ರಸ್ತೆಯ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ರಸ್ತೆ ಅಲ್ಲಲ್ಲಿ ಕೊಚ್ಚಿಹೋಗಿದೆ. ಸಂಚಾರ ಸಂಪೂರ್ಣ ಬಂದ್ ಆಗಿದೆ.

ಬೈಲಹೊಂಗಲ ಅವರಾದಿ ಕಿತ್ತೂರು ಮಾರ್ಗದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಖೋದಾನಪುರ ಜಮಳೂರ ಗ್ರಾಮದ ನಡುವೆ ಗೂಡ್ಸ್ ವಾಹನ ಬರಮಬಾವಿಹಳ್ಳದಲ್ಲಿ ಕೊಚ್ಚಿ ಹೋಗಿದೆ. ವಾಹನದಲ್ಲಿದ್ದ ಚಾಲಕನನ್ನು ಗ್ರಾಮಸ್ಥರು ಕಾಪಾಡಿದ್ದಾರೆ. ಈ ರಸ್ತೆಯನ್ನೂ ಬಂದ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT