ಗೋಕಾಕ: ‘ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮತ್ತು ಅದರಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡ ದೂರ ಅಗುವುದರೊಂದಿಗೆ ಮನಸ್ಸಿಗೆ ಶಾಂತಿ–ನೆಮ್ಮದಿ ಎಂಬ ಫಲ ಲಭಿಸುತ್ತದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕುರಬರ ದಡ್ಡಿಯ ವಿಠ್ಠಲ ದೇವರ ಹಾಗೂ ಮುರಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿಶನಿವಾರ ಭಾಗವಹಿಸಿ ದೇವರ ದರ್ಶನ ಪಡೆದು, ಜಾತ್ರಾ ಸಮಿತಿಯವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.

‘ಭಕ್ತಿ ಎನ್ನುವುದು ಮನಸ್ಸಿನಲ್ಲಿದ್ದರೆ ಸಾಕು. ಪ್ರತಿ ದಿನ ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿದರೆ, ದೇವರ ಅನುಗ್ರಹವಾಗುತ್ತದೆ. ನಾವು ಒಳ್ಳೆಯತನ ರೂಢಿಸಿಕೊಂಡರೆ ಇತರರಿಗೂ ಉತ್ತಮ. ಅದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡ ತುಕಾರಾಮ ಕಾಗಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಹನುಮಂತ ಕಾಳಮ್ಮನಗುಡಿ, ಹರೀಶ ಬೂದಿಹಾಳ, ವಿಜಯ ಜತ್ತಿ, ಕೆಂಚಪ್ಪ ಗೌಡರ, ರಾಯಪ್ಪ ಗೋಟೆನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.