ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನ ಹುಂಡಿಗೆ ₹ 1.13 ಕೋಟಿ ಕಾಣಿಕೆ: ಹುಂಡಿಗೆ ಬಿದ್ದ ಚಿತ್ರವಿಚಿತ್ರ ಬೇಡಿಕೆ

ಆನ್‌ಲೈನ್‌ ಗೇಮಲ್ಲಿ ಸೋತ ದುಡ್ಡು ವಾಪಸ್‌ ಬರುವಂತೆ ಮಾಡು ಎಂದು ಬೇಡಿಕೆಯಿಟ್ಟ ಭಕ್ತ
Last Updated 24 ಜೂನ್ 2022, 9:32 IST
ಅಕ್ಷರ ಗಾತ್ರ

ಉಗರಗೋಳ (ಬೆಳಗಾವಿ ಜಿಲ್ಲೆ):ಸವದತ್ತಿ ಸಮೀಪದ ಉಗರಗೋಳದಲ್ಲಿರುವ ಪುರಾಣ ಪ್ರಸಿದ್ಧ ರೇಣುಕಾದೇವಿ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ ಅನೇಕ ರೀತಿಯ ವಿಚಿತ್ರ ಬೇಡಿಕೆಗಳಿರುವಪತ್ರಗಳು ಸಿಕ್ಕಿವೆ. ಅಪಾರ ಪ್ರಮಾಣದ ಹಣವು ಕಾಣಿಕೆ ರೂಪದಲ್ಲಿ ಹರಿದುಬಂದಿದೆ.

* ಆನ್‌ಲೈನ್‌ ಗೇಮಿನಲ್ಲಿ ಎಲ್ಲ ರೊಕ್ಕ ಸೋತಿದ್ದೇನೆ. ತಾಯಿ, ಅದೆಲ್ಲ ವಾಪಸ್‌ ಬರುವಂತೆ ಮಾಡು...

* ನನಗೆ ಮಾಟ– ಮಂತ್ರ ಮಾಡಿಸಿದ್ದಾರೆ. ಅವರಿಗೆ ನೀನು ಶಿಕ್ಷೆ ಕೊಟ್ಟರೆ, ನಿನ್ನ ಹುಂಡಿಗೆ ₹ 50 ಸಾವಿರ ಕಾಣಿಕೆ ಹಾಕುತ್ತೇನೆ...

* ನನಗೆ ಗಂಡುಮಗು ಕೊಡು ತಾಯೇ... ಬೆಳ್ಳಿ ತೊಟ್ಟಿಲು ಕೊಡುತ್ತೇನೆ

- ಎಂಬಿತ್ಯಾದಿ ಬೇಡಿಕೆಗಳು ಕಾಣಿಕೆ ಪೆಟ್ಟಿಗೆಯನ್ನು ಸೇರಿವೆ.

ಯಲ್ಲಮ್ಮನ ಗುಡ್ಡದ ಕಾಣಿಕೆ ಹುಂಡಿ ಎಣಿಕೆ ಕೊನೆಗೊಂಡಿದ್ದು, ಕೇವಲ 45 ದಿನಗಳಲ್ಲಿ ₹ 1.13 ಕೋಟಿ ನಗದು, ₹ 22 ಲಕ್ಷ ಮೌಲ್ಯದ

ಚಿನ್ನ, ₹ 3 ಲಕ್ಷದ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.

ಬಹುಭಾಷೆಯಲ್ಲಿ ಕೋರಿಕೆ:ದಕ್ಷಿಣ ಭಾರತದ ಶಕ್ತಿ ಕೇಂದ್ರವಾದ ತಾಯಿ ಯಲ್ಲಮ್ಮನ ಗುಡ್ಡಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಉತ್ತರ ಭಾರತದಿಂದಲೂ ಅಪಾರ ಭಕ್ತರು ಬರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

ಈಬಾರಿಯ ಕಾಣಿಕೆ ಹುಂಡಿಯಲ್ಲಿ ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲೂ ಭಕ್ತರು ಪತ್ರ ಬರೆದು, ಕೋರಿಕೆ ಸಲ್ಲಿಸಿದ್ದಾರೆ.

ವಿದೇಶಿ ಕರೆನ್ಸಿ ನೋಟುಗಳೂ ದೇವಿಗೆ ಅರ್ಪಣೆ:ವಿಶೇಷವೆಂದರೆ, ರೂಪಾಯಿ ಮಾತ್ರವಲ್ಲದೇ, ಬೇರೆಬೇರೆ ದೇಶದ ಕರೆನ್ಸಿ ನೋಟುಗಳೂ ಹುಂಡಿಯಲ್ಲಿ ಸಿಕ್ಕಿವೆ!

ಅರಬ್‌ ಸಂಯುಕ್ತ ರಾಷ್ಟ್ರಗಳಿಗೆ ಸೇರಿದ 500 ಮುಖಬೆಲೆಯ ದಿರ್ಹಮ್ಸ್, 100, 20, 10 ಮುಖಬೆಲೆಯ ನೋಟುಗಳೂ ಇವೆ. ಸಿಂಗಪೂರ್‌ನ 5 ಡಾಲರ್ ಮುಖಬೆಲೆಯ ಎರಡು ನೋಟುಗಳೂ ಹುಂಡಿಯಲ್ಲಿದ್ದವು.

ಬುಧವಾರ ಸಂಜೆ ಹುಂಡಿ ಎಣಿಕೆ ಆರಂಭಿಸಿದ್ದ ದೇವಸ್ತಾನದ ಸಿಬ್ಬಂದಿ ಗುರುವಾರ ರಾತ್ರಿ ಮುಗಿಸಿದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT