ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಥಣಿ ಜಿಲ್ಲೆಗಾಗಿ ಸಿಎಂಗೆ ಆಗ್ರಹಿಸುವೆ: ಸವದಿ

Published 12 ಡಿಸೆಂಬರ್ 2023, 6:25 IST
Last Updated 12 ಡಿಸೆಂಬರ್ 2023, 6:25 IST
ಅಕ್ಷರ ಗಾತ್ರ

ಅಥಣಿ : ‘ಅಖಂಡ ಬೆಳಗಾವಿ ಜಿಲ್ಲೆಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ.ಬೆಳಗಾವಿಯಿಂದ ಅಥಣಿಯನ್ನು ಪ್ರತ್ಯೇಕವಾಗಿಸಿ ಅಥಣಿ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಜಿಲ್ಲಾ ಹೋರಾಟ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಅಥಣಿ ಬಂದ ಮತ್ತು ಪ್ರತಿಭಟನಾ ರ‍್ಯಾಲಿ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೆಳಗಾವಿ ದೊಡ್ಡ ಜಿಲ್ಲೆಯಾಗಿ ಮುಂದುವರೆಯಲಿ. ಅಥಣಿಗೆ ಪಕ್ಕದ ಕ್ಷೇತ್ರಗಳಾದ ಕಾಗವಾಡ, ಕುಡಚಿ, ರಾಯಬಾಗ, ಹಾರುಗೇರಿಗಳ ಜೊತೆಗೆ ಬಾಗಲಕೋಟೆ ಜಿಲ್ಲೆಯ ಎರಡು ಕೇತ್ರಗಳನ್ನು ಸೇರಿಸಿಕೊಂಡು ಅಥಣಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದಲ್ಲಿ ಈ ಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಬೆಳಗಾವಿಗೆ  200 ಕಿ.ಮೀ ದೂರ ಹೋಗಿ ಬರುವ ಬವಣೆ ನೀಗಲಿದೆ.  ಆಡಳಿತ್ಮಕವಾಗಿ ದೃಷ್ಟಿಯಿಂದ ಆಡಳಿತ ಜನರ ಸಮೀಪ ತರುವುದಕ್ಕೆ ಅಥಣಿ ಅನುಕೂಲರವಾಗಲಿದೆ. ಈ ಕುರಿತು ನಾನು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವೆ’ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ, ಗೌರವ ಅಧ್ಯಕ್ಷ ಶಿವಕುಮಾರ ಸವದಿ, ಮಾಜಿ ಶಾಸಕ ಶಹಾಜಹಾನ ಡೊಂಗರಗಾವ, ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಸಿದ್ದಾರ್ಥ ಸಿಂಗೆ, ಶಿವರುದ್ರ ಗೂಳಪ್ಪನವರ, ರಾಜು ಅಳಬಾಳ, ಸತೀಶ ಪಾಟೀಲ್, ದೀಪಕ ಬುರ್ಲಿ, ರವಿ ಬಡಕಂಬಿ, ಪ್ರಮೋದ ಬಿಳ್ಳೂರ, ರಾಮನಗೌಡ ಪಾಟೀಲ, ರಮೇಶ ಮಾಳಿ, ಶಿವಾನಂದ ಹುನ್ನೂರ, ಎಸ್ ಆರ್ ಘೂಳಪ್ಪನ್ನವರ, ಮಂಜು ಹೋಳಿಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT