ಕಾಗವಾಡ: ಒಂದು ಪಟ್ಟಣ, ನಗರದ ಸಂಸ್ಕಾರವನ್ನು ತಿಳಿದುಕೊಳ್ಳಬೇಕು ಎಂದರೆ ಅಲ್ಲಿಯ ರಿಕ್ಷಾ ಚಾಲಕರಿಂದ ತಿಳಿಯಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ರಿಕ್ಷಾ ಚಾಲಕರು ಸ್ನೇಹಪರವಾಗಿ ವರ್ತಿಸುವುದು ಮುಖ್ಯ. ಏಕೆಂದರೆ ರಿಕ್ಷಾ ಚಾಲಕರು ನಗರದ ಕನ್ನಡಿಯಾಗಿರುತ್ತಾರೆ. ಜನರು ರಿಕ್ಷಾ ಚಾಲಕರ ನಡವಳಿಕೆಯ ಆಧಾರದ ಮೇಲೆ ಒಂದು ಪಟ್ಟಣ ಅಥವಾ ನಗರವನ್ನು ಅಳೆಯಲಾಗುತ್ತದೆ ಎಂದು ನಿರ್ಮಲ ಆಸ್ಪತ್ರೆ ಮನೋವೈದ್ಯ ಡಾ. ಚಂದ್ರಶೇಖರ ಹಲಿಂಗೆಳೆ ಹೇಳಿದರು.

ಮಿರಜ ಪಟ್ಟಣದಲ್ಲಿ ಸಾಂಗಲಿ ಜಿಲ್ಲಾ ಪ್ರಯಾಣಿಕ ಎಪೆ ರಿಕ್ಷಾ ಸಂಘದ 11ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಇಲ್ಲಿಯವರೆಗೆ ಸಾಂಗಲಿ ಜಿಲ್ಲಾ ಪ್ರಯಾಣಿಕ ಎಪೆ ರಿಕ್ಷಾ ಸಂಘ ಸಾಂಗಲಿ ಜಿಲ್ಲೆ ಮತ್ತು ಮಿರಜ್ ಪಟ್ಟಣದ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಿದ್ದು ಅದಕ್ಕಾಗಿಯೇ 11ನೇ ವಾರ್ಷಿಕೋತ್ಸವವನ್ನು ಅತ್ಯಂತ ಸಂತೋಷದಿಂದ ಆಚರಿಸಿಕೊಳ್ಳುತ್ತಿದೆ ಎಂದರು.

ಸಾಂಗಲಿ ನಗರದ ಸಾರಿಗೆ ಉಪ ನಿರೀಕ್ಷಕಿ ಕೀರ್ತಿ ಕೇಟ, ಸಾರಿಗೆ ಉಪ ನಿರೀಕ್ಷಕ ಶೇಖರ ನಿಕ್ಕಮ ರಿಕ್ಷಾ ಚಾಲಕರ ಸಮಸ್ಯೆ ಮತ್ತು ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಮತ್ತು ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಮಹೇಶ್ ಚೌಗುಲೆ, ನಿರ್ಮಲ ಆಸ್ಪತ್ರೆಯ ಮನೋಶ್ಶಾಸ್ತ್ರಜ್ಞ ಸಚೀನ ಪಾಟೀಲ, ಫಾದರ್ ಜೋಸೆಫ್ ರಿಕ್ಷಾ ಸಂಘಟನೆಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.