ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು ಕೂಟ: ರಿಧಿಮಾ ದಾಖಲೆ ‘ಡಬಲ್‌’

3ನೇ ದಿನ 6 ಪಟುಗಳಿಂದ ದಾಖಲೆ
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ರಿಧಿಮಾ ವೀರೇಂದ್ರಕುಮಾರ ಕರ್ನಾಟಕ ರಾಜ್ಯ ಈಜು ಸಂಸ್ಥೆ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಇಲ್ಲಿನ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಶುಕ್ರವಾರ ನಡೆದ ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸತತ 2ನೇ ದಿನವೂ ದಾಖಲೆ ಬರೆದು ಮಿಂಚಿದರು.

ಬಾಲಕಿಯರ(ಜೂನಿಯರ್‌ ಗುಂಪು–1) 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಗುರುವಾರ ದಾಖಲೆ ಬರೆದಿದ್ದ ಅವರು, ಶುಕ್ರವಾರ (ಜೂನಿಯರ್‌ ಗುಂಪು–1) 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ (1:04.60ಸೆ.) ಗುರಿ ಮುಟ್ಟಿದರು. ಈ ಮೂಲಕ ಬೆಳಗಾವಿಯಲ್ಲಿ ತಾವೇ ನಿರ್ಮಿಸಿದ್ದ (1:05.71ಸೆ.) ದಾಖಲೆ ಮುರಿದರು. ಉಳಿದಂತೆ ಡಿಕೆವಿ ಈಜು ಕೇಂದ್ರದ ಎ.ಜೆದಿದಾಹ್‌, ಡಾಲ್ಫಿನ್‌ ಈಜು ಕೇಂದ್ರದ ಮಾನವಿ ವರ್ಮಾ, ಇಶಾನ್‌ ಮೆಹ್ರಾ, ಧಿನಿಧಿ ದೆಸಿಂಘು, ಬಸವನಗುಡಿ ಈಜು ಕೇಂದ್ರದ ಎಸ್‌.ಲಕ್ಷ್ಯ ದಾಖಲೆ ನಿರ್ಮಿಸಿದರು.

ಬಾಲಕಿಯರ ವಿಭಾಗದ(ಜೂನಿಯರ್‌ ಗುಂಪು–2) 100 ಮೀ. ಬಟರ್‌ಫ್ಲೈನಲ್ಲಿ ಧಿನಿಧಿ ದೆಸಿಂಘು(ಡಾಲ್ಫಿನ್‌ ಈಜು ಕೇಂದ್ರ;1:04.26ಸೆ.) ಗುರಿ ಮುಟ್ಟಿ, ಇಲ್ಲಿ ಹಾಷಿಕಾ ರಾಮಚಂದ್ರ ಅವರು ಗುರುವಾರ ಮಾಡಿದ್ದ ದಾಖಲೆ(1:05.51ಸೆ.)ಯನ್ನು ಸರಿಗಟ್ಟಿದರು.

ಬಾಲಕಿಯರ ವಿಭಾಗದ(ಜೂನಿಯರ್‌ ಗುಂಪು–1) 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಎಸ್‌.ಲಕ್ಷ್ಯ(ಬಸವನಗುಡಿ ಈಜು ಕೇಂದ್ರ;2:46.53ಸೆ.) ಗುರಿ ಮುಟ್ಟಿ, ಇಲ್ಲೇ ತಾವೆ ನಿರ್ಮಿಸಿದ್ದ (2:47.54ಸೆ.) ದಾಖಲೆ ಮುರಿದರು.

ಬಾಲಕಿಯರ ವಿಭಾಗದ(ಜೂನಿಯರ್‌ ಗುಂಪು–1) 200 ಮೀ. ಮಿಡ್ಲೆಯಲ್ಲಿ ಎ.ಜೆದಿದಾಹ್‌(ಕಾಲ: 2:29.51ಸೆ.) ಗುರಿ ಮುಟ್ಟಿ, 2021ರಲ್ಲಿ ಬೆಂಗಳೂರಿನಲ್ಲಿ ಲಕ್ಷ್ಯ ಎಸ್‌.(2:30.67ಸೆ.) ಅವರು ಮಾಡಿದ್ದ ದಾಖಲೆಯನ್ನು ಮುರಿದರು.

ಬಾಲಕಿಯರ ವಿಭಾಗದ(ಜೂನಿಯರ್‌ ಗುಂಪು–2) 200 ಮೀ. ಮಿಡ್ಲೆಯಲ್ಲಿ ಮಾನವಿ ವರ್ಮಾ(2:29.20ಸೆ.) ಗುರಿ ಮುಟ್ಟಿ, 2019ರಲ್ಲಿ ರಾಜಕೋಟ್‌ನಲ್ಲಿ ಅಪೇಕ್ಷಾ ಫರ್ನಾಂಡೀಸ್‌(2:27.09ಸೆ.) ಮಾಡಿದ್ದ ದಾಖಲೆ ಮುರಿದರು.

ಬಾಲಕರ(ಜೂನಿಯರ್‌ ಗುಂಪು–2) ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಇಶಾನ್‌ ಮೆಹ್ರಾ(1:02.86ಸೆ.) ಗುರಿ ತಲುಪಿ, 2019ರಲ್ಲಿ ರಾಜಕೋಟ್‌ನಲ್ಲಿ ಸಾಹಿಲ್‌ ಲಾಸ್ಕರ್‌(1:01.45ಸೆ.) ನಿರ್ಮಿಸಿದ್ದ ದಾಖಲೆ ಮುರಿದರು.

ಫಲಿತಾಂಶ: ಬಾಲಕರ(ಜೂನಿಯರ್‌) ವಿಭಾಗ: ಗುಂಪು–1ರ 200 ಮೀ. ಮಿಡ್ಲೆ: ನಯನಾ ವಿಘ್ನೇಶ(ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರ;2:14.13ಸೆ.)–1, ವಿಧಿತ್‌ ಶಂಕರ(ಡಾಲ್ಫಿನ್‌ ಈಜು ಕೇಂದ್ರ;2:17.64ಸೆ.)–2, ಪವನ ಧನಂಜಯ(ಬಸವನಗುಡಿ ಈಜು ಕೇಂದ್ರ;2:19.77ಸೆ.)–3.

ಗುಂಪು–2ರ 200 ಮೀ. ಮಿಡ್ಲೆ: ಆರ್‌.ನವನೀತ್‌ಗೌಡ(ಡಾಲ್ಫಿನ್‌ ಈಜು ಕೇಂದ್ರ;2:19.79ಸೆ.)–1, ಯಶ್‌ ಕಾರ್ತಿಕ್‌(ಬಸವನಗುಡಿ ಈಜು ಕೇಂದ್ರ;2:23.89ಸೆ.)–2, ಅಮನ್‌ ಸುಣಗಾರ(ಬೆಳಗಾವಿಯ ಸ್ವಿಮ್ಮರ್ಸ್‌ ಕ್ಲಬ್‌;2:24.91ಸೆ.)–3.

ಗುಂಪು–1ರ 100 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್‌ ಪಾಟೀಲ(ಬಸವನಗುಡಿ ಈಜು ಕೇಂದ್ರ;58.81ಸೆ.)–1, ಧ್ಯಾನ್ ಎಂ(ಗ್ಲೋಬಲ್‌ ಈಜು ಕೇಂದ್ರ;1:01.68ಸೆ.)–2, ಆಕಾಶ ಮಾಣಿ(ಬಸವನಗುಡಿ ಈಜು ಕೇಂದ್ರ;1.02.00ಸೆ.)–3.

ಗುಂಪು–2ರ 100 ಮೀ. ಬ್ಯಾಕ್‌ಸ್ಟ್ರೋಕ್‌: ಇಶಾನ್‌ ಮೆಹ್ರಾ(1:02.86ಸೆ.)–1, ಕುಶಾಲ್‌ ಕೆ(ಬಸವನಗುಡಿ ಈಜು ಕೇಂದ್ರ;1:03.86ಸೆ.)–2, ಅಮನ್‌ ಸುಣಗಾರ(ಬೆಳಗಾವಿಯ ಸ್ವಿಮ್ಮರ್ಸ್‌ ಕ್ಲಬ್‌;1:04.95ಸೆ.)–3.

ಸಬ್‌ ಜೂನಿಯರ್‌ ಗುಂಪು–3ರ 200 ಮೀ. ಮಿಡ್ಲೆ: ವಿಹಾನ್‌ ಚತುರ್ವೇದಿ(ಬಸವನಗುಡಿ ಈಜು ಕೇಂದ್ರ; 2:46.76ಸೆ.)–1, ಜಾಸ್‌ ಸಿಂಗ್‌(ಮತ್ಸ್ಯ ಐಎನ್‌ಸಿ;2:45.51ಸೆ.)–2, ವೈಭವ ಪ್ರತಾಪ್‌(ಡಿಕೆವಿ ಈಜು ಕೇಂದ್ರ;2:48.83ಸೆ.)–3.

ಬಾಲಕಿಯರ(ಜೂನಿಯರ್‌) ವಿಭಾಗ:

ಗುಂಪು–1ರ 200 ಮೀ. ಮಿಡ್ಲೆ: ಎ.ಜೆದಿದಾಹ್‌(2:29.51ಸೆ.)–1, ಎಸ್‌.ಲಕ್ಷ್ಯ(ಬಸವನಗುಡಿ ಈಜು ಕೇಂದ್ರ;2.35.83ಸೆ.)–2, ಅಂಶು ದೇಶಪಾಂಡೆ(ಡಾಲ್ಫಿನ್‌ ಈಜು ಕೇಂದ್ರ;2:40.01ಸೆ.)–3.

ಗುಂಪು–2ರ 200 ಮೀ. ಮಿಡ್ಲೆ: ಮಾನವಿ ವರ್ಮಾ(2:29.20ಸೆ.)–1, ವಿನಿತಾ ನಯನಾ(ಬಸವನಗುಡಿ ಈಜು ಕೇಂದ್ರ; 2:37.05ಸೆ.)–2, ಪ್ರಿಯಾಂಶಿ ಮಿಶ್ರಾ (ಗಫ್ರೆಯ್‌ ಸ್ವಿಮ್ಮಿಂಗ್‌ ಪ್ರೋಗ್ರಾಮ್‌;2:38.90ಸೆ.)–3.

ಗುಂಪು–1ರ 100 ಮೀ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರಕುಮಾರ(1:04.60ಸೆ.)–1, ನಿನಾ ವೆಂಕಟೇಶ(1:08.17ಸೆ.)–2, ಶಾಲಿನಿ ದೀಕ್ಷಿತ್‌(ಇಬ್ಬರೂ ಡಾಲ್ಫಿನ್‌ ಈಜು ಕೇಂದ್ರ; 1:08.51ಸೆ.)–3.

ಗುಂಪು–2ರ 100 ಮೀ. ಬ್ಯಾಕ್‌ಸ್ಟ್ರೋಕ್‌: ಪ್ರಿಯಾಂಶಿ ಮಿಶ್ರಾ(ಗಫ್ರೆಯ್‌ ಸ್ವಿಮ್ಮಿಂಗ್‌ ಪ್ರೊಗ್ರಾಮ್‌;1:13.12ಸೆ.)–1, ನಕ್ಷತ್ರಾ ಗೌತಮ(ಬಸವನಗುಡಿ ಈಜು ಕೇಂದ್ರ; 1:13.46ಸೆ.)–2, ಸುದ್ಧಿ ಶಾಹ್‌(ಡಾಲ್ಫಿನ್‌ ಈಜು ಕೇಂದ್ರ;1:14.75ಸೆ.)–3.

ಸಬ್‌ ಜೂನಿಯರ್‌: ಗುಂಪು–3ರ 200 ಮೀ. ಮಿಡ್ಲೆ: ಶೆಲಿನ್‌ ಸುನೀಲ್‌(ಡಾಲ್ಫಿನ್‌ ಈಜು ಕೇಂದ್ರ;2:48.31ಸೆ.)–1, ತ್ರಿಶಾ ಸಿಂಧು(2:49.95ಸೆ.)–2, ಸಾನ್ವಿ ಮೈಗು(ಇಬ್ಬರೂ ಡಿಕೆವಿ ಈಜು ಕೇಂದ್ರ;2:57.37ಸೆ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT