₹ 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

ಬೆಳಗಾವಿ: ಬಸ್ಸಾಪುರ, ಹುಲಿಕಟ್ಟಿ ಭಾಗಗಳಿಂದ ಹಿರೇಬಾಗೇವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರಿಕರಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬುಧವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
‘₹ 2 ಕೋಟಿ ಅಂದಾಜು ವೆಚ್ಚದಲ್ಲಿ ರಸ್ತೆ ಸುಧಾರಣೆಯಾಗಲಿದೆ. ಅತ್ಯಂತ ಹಿಂದುಳಿದ ಈ ಪ್ರದೇಶದ ರಸ್ತೆ ಸುಧಾರಣೆಗೆ ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆ ಇತ್ತು’ ಎಂದು ಹೇಳಿದರು.
ಸ್ಥಳೀಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ. ಪಾಟೀಲ, ಸುರೇಶ ಇಟಗಿ, ಅಡಿವೇಶ ಇಟಗಿ, ಚಂಬಣ್ಣ ಉಳೇಗಡ್ಡಿ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಮದುಭರಮಣ್ಣವರ, ಸೈಯದ್ ಸನದಿ, ಆನಂದಗೌಡ ಪಾಟೀಲ, ರವಿ ಬಾಗೇವಾಡಿ, ಮಹೇಶ ಬಾಗೇವಾಡಿ, ಘಟಿಗೆಪ್ಪ ಗುರವಣ್ಣವರ, ಬಿ.ಜಿ. ವಾಲಿ ಇಟಗಿ, ಅನಿಲ ಪಾಟೀಲ, ಮೀರಾಸಾಬ್ ನದಾಪ್, ಮಹಾಂತೇಶ ಘೋಡಗೇರಿ, ದೇಮಣ್ಣ ಧರೆಪ್ಪನವರ, ಗೌಸಮೊದ್ದಿನ ಜಾಲಿಕೊಪ್ಪ ಇದ್ದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಮಹಿಳಾ ಸ್ವಸಹಾಯ ಗುಂಪಿಗೆ ಸ್ವ ಉದ್ಯೋಗಕ್ಕಾಗಿ ₹ 2.50 ಲಕ್ಷ ಚೆಕ್ ಅನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕಿಣಿಯೆ ಗ್ರಾಮದಲ್ಲಿ ರಮಾಬಾಯಿ ಮಹಿಳಾ ಸ್ವ ಸಹಾಯ ಸಂಘಕ್ಕೆ ಹಸ್ತಾಂತರಿಸಿದರು.
ಗ್ರಾಮದ ಹಿರಿಯರು, ಉಚಗಾಂವ ಬ್ಲಾಕ್ ಪ.ಜಾತಿ ಘಟಕದ ಅಧ್ಯಕ್ಷ ಮಹೇಶ ಕೋಲಕಾರ, ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.