ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೋಲಿಯೊ ಮುಕ್ತ ಸಮಾಜಕ್ಕೆ ರೋಟರಿ ಸಂಸ್ಥೆ ಪಾತ್ರ ಮಹತ್ತರ'

Published 20 ಜುಲೈ 2023, 13:00 IST
Last Updated 20 ಜುಲೈ 2023, 13:00 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ರೋಟರಿ ಕ್ಲಬ್ ಸಮಾಜ ಸೇವೆಗೆ ಮಾದರಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೊ ನಿರ್ಮೂಲನೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ' ಎಂದು ರೋಟರಿ ಕ್ಲಬ್ ಪಿಡಿಜಿ ಅವಿನಾಶ ಪೋತದಾರ ಹೇಳಿದರು.

ಇಲ್ಲಿನ ಸಿಟಿಇ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ, ಡಿವೈಎಸ್ ಪಿ ಬಸವರಾಜ ಯಲಿಗಾರ ಮಾತನಾಡಿದರು.

ರೋಟರಿ ಕ್ಲಬ್ ಪಿಡಿಜಿ ಅವಿನಾಶ ಪೋತದಾರ ಅವರು ಚಿಕ್ಕೋಡಿ ರೋಟರಿ ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ರಾಜು ಟಿಕ್ಕೆ ಅವರಿಂದ ನೂತನ ಅಧ್ಯಕ್ಷ ಡಾ. ಶಿವಮೂರ್ತಿ ಪಡಲಾಳೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ರೋಟೆರಿಯನ್ ಮಹೇಶ ನೇರ್ಲೆ ಅವರು ಮೂರು ಅಂಗನವಾಡಿಗಳಿಗೆ ಡೆಸ್ಕ್‌ಗಳನ್ನು ವಿತರಿಸಿದರು. ರೋಟರಿ ಸಹಾಯಕ ಗವರ್ನರ ಮಕರಂದ ಕುಲಕರ್ಣಿ, ಹಿರಿಯ ರೋಟೆರಿಯನ್ ವಿಜಯ ಮಾಂಜರೇಕರ, ಪದಾಧಿಕಾರಿಗಳಾದ ಶ್ರೀಧರ ಗಜನ್ನವರ, ದರ್ಶನ ಉಪಾಧ್ಯೆ, ರಾಜು ಟಿಕ್ಕೆ, ನಾಗೇಶ ಕಿವಡ, ರಾಜ್ ಜಾಧವ, ಅರುಣ ಬೋಳಾಜ, ಸಂತೋಷ ರವಳುಕೇಧಾರಿ, ಸತೀಶ ಕುಲಕರ್ಣಿ, ಆನಂದ ಆರವಾರೆ, ಶಿವಕುಮಾರ ಹಂಜಿ, ಮಹೇಶ ನೇರ್ಲೆ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ರಾಜು ಟಿಕ್ಕೆ ಸ್ವಾಗತಿಸಿದರು. ಉದಯ ಪಾಟೀಲ ನಿರೂಪಿಸಿದರು. ಶಿರಿಷ್ ಮೆಹತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT