‘ಡಿ’ ದರ್ಜೆ ನೌಕರರೆಂದು ಪರಿಗಣಿಸಲು ಆಯಾಗಳ ಆಗ್ರಹ

7

‘ಡಿ’ ದರ್ಜೆ ನೌಕರರೆಂದು ಪರಿಗಣಿಸಲು ಆಯಾಗಳ ಆಗ್ರಹ

Published:
Updated:
Deccan Herald

ಬೆಳಗಾವಿ: ಸರ್ಕಾರದ ಆದೇಶದ ಪ್ರಕಾರ ಶಾಲೆಗಳ ಆಯಾಗಳಿಗೆ ₹17ಸಾವಿರ ವೇತನ ನೀಡುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಆಯಾಗಳ ಸಂಘದವರು ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘2018ರ ನ. 19ರಂದು ಸರ್ಕಾರವು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಮನೆ ಬಾಡಿಗೆ ಭತ್ಯೆ ಹಾಗೂ ತುಟ್ಟಿ ಭತ್ಯೆಯನ್ನು ಸೇರಿಸಿ ವೇತನ ಪಾವತಿಸಬೇಕು. 2012ರ ಜ.1ರ ನಂತರ ಮೃತಪಟ್ಟ ಆಯಾಗಳ ಹುದ್ದೆಗಳಿಗೆ ಅವರ ಹತ್ತಿರದ ಸಂಬಂಧಿಕರನ್ನು ತೆಗೆದುಕೊಳ್ಳಬೇಕು. 60 ವರ್ಷ ವಯಸ್ಸು ದಾಟಿದ ಆಯಾಗಳಿಗೆ ₹ 6ಸಾವಿರ ಪಿಂಚಣಿ ನಿಗದಿ‍ಪಡಿಸಬೇಕು. ಡಿ ದರ್ಜೆ ನೌಕರರೆಂದು ಪರಿಗಣಿಸಿ, ಅವರಿಗೆ ಕೊಡುವ ಎಲ್ಲ ರೀತಿಯ ಸೌಲಭ್ಯಗಳನ್ನು ನಮಗೂ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಹೈಕೋರ್ಟ್‌ ಆದೇಶದಂತೆ ನಮಗೆ ಕನಿಷ್ಠ ವೇತನ ನಿಗದಪಡಿಸಬೇಕು. 2002ರಿಂದ 2012ರವರೆಗೆ ಬೇಸಿಗೆ ರಜೆಯ ಬಾಕಿ ವೇತನ ಪಾವತಿಸಬೇಕು. ಬೆಳಗಾವಿ, ಚಿಕ್ಕೋಡಿ, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಹಾವೇರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಇನ್ನೂ ಪಾವತಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಾವತಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷೆ ಸುಶೀಲಾದೇವಿ, ಪದಾಧಿಕಾರಿಗಳಾದ ಕಮಲಮ್ಮ ಜೈನಾಪುರೆ, ಗಂಗಮ್ಮ ಕನಕಗಿರಿ, ಶಾರದಾಬಾಯಿ ಧಾರವಾಡ  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !