ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಶಹಾಪುರ ಸಲಹೆ

Last Updated 28 ಜನವರಿ 2020, 13:50 IST
ಅಕ್ಷರ ಗಾತ್ರ

ಬೆಳಗಾವಿ: ‘ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಸಲಹೆ ನೀಡಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಹಯೋಗದಲ್ಲಿ ತಾಲ್ಲೂಕಿನ ಹೊನಗಾದ ಜಂಬಗಿ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಿ.ಎಲ್.ಇ.ಪಿ.ಸಿ.-10 ಇನ್‌ಸ್ಪೈರ್‌ ಅವಾರ್ಡ್‌ ಪಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಗಡಿ ಪ್ರದೇಶದ ಮಕ್ಕಳು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಅವರು ಪ್ರತಿಭೆ ಹಾಗೂ ಸಂಶೋಧನಾತ್ಮಕ ಚಿಂತನೆಗಳನ್ನು ವ್ಯಕ್ತಪಡಿಸಲು ಪೂರಕವಾಗುವಂತೆ ಸರ್ಕಾರವು ಇಂತಹ ಕಾರ್ಯಕ್ರಮಗಳ ಮೂಲಕ ವೇದಿಕೆ ಒದಗಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಪ್ರೌಢಶಾಲಾ ಮಕ್ಕಳಿಗೆ ಸಿದ್ಧಪಡಿಸಿದ, ವಿಜ್ಞಾನ ಪಠ್ಯದಲ್ಲಿ ಬರುವ ಪ್ರಯೋಗಗಳ ಹೊತ್ತಿಗೆ ‘ವಿಜ್ಞಾನ ದೀಪ್ತಿ’ ಬಿಡುಗಡೆ ಮಾಡಲಾಯಿತು.

ಬೆಳಗಾವಿ ಡಯಟ್‌ ಉಪ ನಿರ್ದೇಶಕ ಎಂ.ಎಂ. ಸಿಂಧೂರ ಮಾತನಾಡಿದರು.

ಸಹ ನಿರ್ದೇಶಕ ಪ್ರಸನ್ನಕುಮಾರ, ಬೆಳಗಾವಿಯ ಉಪ ನಿರ್ದೇಶಕ ಡಾ.ಎ.ಬಿ. ಪುಂಡಲೀಕ, ಚಿಕ್ಕೋಡಿ ಉಪ ನಿರ್ದೇಶಕ ಗಜಾನನ ಬಿ.ಮನ್ನಿಕೇರಿ, ಜಂಬಗಿ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಡಾ.ಲಕ್ಷ್ಮಣ ಜಂಬಗಿ, ಬಿಇಒ, ಬಿಆರ್‌ಸಿಗಳು ಭಾಗವಹಿಸಿದ್ದರು.

ಹಿರಿಯ ಉಪನ್ಯಾಸಕ ಪಿ.ಬಿ. ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT