ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿಪತ್ತು ಬಂದಾಗ ಸೇವೆ ಮಾಡಿ‘

Published : 26 ಸೆಪ್ಟೆಂಬರ್ 2024, 14:43 IST
Last Updated : 26 ಸೆಪ್ಟೆಂಬರ್ 2024, 14:43 IST
ಫಾಲೋ ಮಾಡಿ
Comments

ಹುಕ್ಕೇರಿ: ಹುಕ್ಕೇರಿ ಮತ್ತು ಸಂಕೇಶ್ವರ ವಲಯಗಳ ವಿಪತ್ತು ನಿರ್ವಹಣೆ ಘಟಕದ ಸ್ವಯಂ ಸೇವಕರಿಗೆ ತಾಲ್ಲೂಕಿನ ನಿಡಸೋಶಿಯ ದುರದುಂಡೇಶ್ವರ ಮಠದಲ್ಲಿ ಗುರುವಾರ ನಡೆದ ‘ಶೌರ್ಯ ವಿಪತ್ತು ಸ್ವಯಂ ಸೇವಕರ ತರಬೇತಿ’ ಕಾರ್ಯಕ್ರಮವನ್ನು ಸುಬೇದಾರ್ ಎಸ್.ಕೆ.ದೇಸಾಯಿ ಹಾಗೂ ನಿಡಸೋಸಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮದೀನಾ ಶಾನೂರ್ ಮಕಾಂದಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಸುಬೇದಾರ್ ಎಸ್.ಕೆ.ದೇಸಾಯಿ, ‘ಯುವಕರು ಸೈನ್ಯದಲ್ಲಿ ಸೇರಿ ದೇಶ ಮಾಡಬೇಕಂತಿಲ್ಲ. ದೇಶದ ಒಳಗೆ ಜನರಿಗೆ ವಿಪತ್ತು ಬಂದಾಗ ಸೇವೆ ಸಲ್ಲಿಸಿದರೆ, ಅದುವೇ ದೇಶ ಸೇವೆ’ ಎಂದರು.

 ಮಂಗಳೂರಿನ ಉಷಾ ಪೈಯರ್ ಸೇಪ್ಟಿ ಕಂಪನಿ ತರಬೇತುದಾರ ಸಂತೋಷ್ ಪೀಟರ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.

ಜನಜಾಗೃತಿ ವೇದಿಕೆ ಚಿಕ್ಕೋಡಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಜಿ.ಕೊಣ್ಣೂರ್, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಪಾಟೀಲ್ ಮುಖ್ಯ ಅತಿಥಿಗಳಾಗಿದ್ದರು.

ಬೆಳ್ತಂಗಡಿಯ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಜನಜಾಗೃತಿ ಪ್ರಾದೇಶಿಕ ಕಚೇರಿಯ ಜೈವಂತ್ ಪಟಗಾರ ಪ್ರಾಸ್ತಾವಿಕ ಮಾತನಾಡಿದರು.

ಸಂಕೇಶ್ವರ ಯೋಜನಾಧಿಕಾರಿ ವಿನಾಯಕ್ ಡಿ.ಕಾಕಂಬಿ, ಹುಕ್ಕೇರಿ ವಲಯ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ, ಮೇಲ್ವಿಚಾರಕ ಬಸವರಾಜ್, ಜನಜಾಗೃತಿ ವೇದಿಕೆ ಮೇಲ್ವಿಚಾರಕ ಉಮೇಶ್ ಹಾಗೂ ಎರಡೂ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನೂರಾರು ಸ್ವಯಂ ಸೇವಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT