ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರಿ ಸಾಕಿ ಯಶ ಕಂಡ ಮಾರುತಿ

ವಿವಿಧ ತಳಿಗಳ 150 ಕುರಿ ಸಾಕಣೆ; ₹30 ಲಕ್ಷ ವಾರ್ಷಿಕ ಆದಾಯ
ಬಾಲಶೇಖರ ಬಂದಿ
Published 29 ಡಿಸೆಂಬರ್ 2023, 5:29 IST
Last Updated 29 ಡಿಸೆಂಬರ್ 2023, 5:29 IST
ಅಕ್ಷರ ಗಾತ್ರ

ಮೂಡಲಗಿ: ಪದವಿ ಪಡೆದು, ಕೆಲಸ ಗಿಟ್ಟಿಸಿಕೊಳ್ಳುವುದೇ ಜೀವನದ ಬಹುದೊಡ್ಡ ಉದ್ದೇಶ ಎಂದು ನಂಬಿರುವ ಕಾಲದಲ್ಲಿ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪದವಿದರ ಯುವಕ ಮಾರುತಿ ಮೌರ್ಯ ಕುರಿ ಸಾಕಾಣಿಕೆ ಮಾಡಿ ಪ್ರತಿ ವರ್ಷ ₹30 ಲಕ್ಷ ಆದಾಯ ಪಡೆಯುವ ಮೂಲಕ ಮಾದರಿ ಎನಿಸಿದ್ದಾರೆ.

ಬಿ.ಕಾಮ್‌ ಪದವಿಧರರಾಗಿರುವ ಮಾರುತಿ ನೌಕರಿಗಾಗಿ ಅಲೆಯದೆ ಅಜ್ಜ ಯಲ್ಲಪ್ಪನ ಪ್ರೇರಣೆಯಿಂದ 2016ರಲ್ಲ 20 ಆಡುಗಳನ್ನು ಸಾಕಿ ಕಾಯಕ ಪ್ರಾರಂಭಿಸಿ ಅಷ್ಟು, ಇಷ್ಟು ಲಾಭ ಗಿಟ್ಟಿಸಿಕೊಂಡರು. ವಿವಿಧ ಕುರಿ ಸಾಕಾಣಿಕೆಯ ಫಾರ್ಮಗಳಿಗೆ ಭೇಟಿ ನೀಡಿ ಸಾಕಾಣಿಕೆಯ ಅನುಭವ ಪಡೆದುಕೊಂಡು 2018ರಲ್ಲಿ ಕೇವಲ 11 ಕುರಿ ಮತ್ತು ಒಂದು ಟಗರು ಸಾಕಿ ಕುರಿ ಸಾಕಾಣಿಕೆ ಪ್ರಾರಂಭಿಸಿದ ಇವರು.  ಇಂದು ವಿವಿಧ ತಳಿಗಳ 150 ಕುರಿಗಳನ್ನು ಹೊಂದಿದ್ದಾರೆ ಇವೆ.

ಹೈಟೆಕ್‌ ಶೆಡ್‌ (ಅಟ್ಟದ ಮಾದರಿ) ನಿರ್ಮಿಸಿದ್ದಾರೆ. ₹3 ಲಕ್ಷ ಬೆಲೆಬಾಳುವ ಡಾರ್ಪರ್‌ ಟಗರ್‌ ಸಾಕಿದ್ದಾರೆ. ಸರ್ಕಾರದ ಪಶು ಸಂಗೋಪನಾ ಇಲಾಖೆಯ ₹7.50 ಲಕ್ಷ ಹಣದಲ್ಲಿ ಕುರಿಗಳಿಗೆ 30X60 ಅಡಿ ಉದ್ದಗಲದ ಶೆಡ್‌ ನಿರ್ಮಿಸಿದ್ದಾರೆ, ₹2.50 ಸಬ್ಸಿಡಿ ಪಡೆದಿದ್ದಾರೆ.

ಶೆಡ್‌ದಲ್ಲಿ ಗಾಳಿ, ಬೆಳಕು ಇದ್ದು, ಕುರಿಗಳು ನಿರಾಂತಕವಾಗಿ ತಿರುಗಾಡಲು . ಅವುಗಳಿಗೆ ಮೇವು, ರಸಮೇವು, ಪೌಷ್ಠಿಕ ಆಹಾರವನ್ನು ನಿಯಮಿತವಾಗಿ ನೀಡುವರು. ‘ಮಾರುಕಟ್ಟೆಯಲ್ಲಿ ಅತೀ ಬೇಡಿಕೆ ಇರುವ ಡಾರ್ಪರ್‌, ನಾರಿ ಸುವರ್ಣ, ಬಂಡೂರ, ಡೆಕ್ಕಣಿ, ಪಂಜಾಪದ ಬಿಟಲ್‌ ತಳಿಗಳನ್ನು ಸಾಕಿದ್ದರಿಂದ ಕುರಿಗಳನ್ನು ಮಾರುಕಟ್ಟೆ ಮಾಡುವುದು ಕಷ್ಟ ಇಲ್ಲರ್ರೀ’ ಎನ್ನುತ್ತಾರೆ ಮಾರುತಿ. 2020ರಲ್ಲಿ 300ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ ದಾಖಲೆ ಮಾಡಿದ್ದಾರೆ.

ತೊಗರಿ ಹೊಟ್ಟು, ಜೋಳದ ಕಣಿಕೆ, ಶೇಂಗಾ ಹೊಟ್ಟು ಮತ್ತು ಕತ್ತರಿಸಿ ಮೇವು ಇವುಗಳ ಮಿಶ್ರಣ ಆಹಾರವಾಗಿ ನೀಡುವರು. 5 ಎಕರೆ ತೋಟವಿದ್ದು ಸಾವಯವದಲ್ಲಿ ಕಬ್ಬು, ಗೋವಿನ ಜೋಳ, ಶೇಂಗಾ ಬೆಳೆಯುತ್ತಾರೆ. ಹೀಗಾಗಿ ಕುರಿಗಳಿಗೆ ಮೇವಿನ ಕೊರತೆ ಇಲ್ಲ. ಗೋವಿನ ಜೋಳ ಮೇವು, ಬೆಲ್ಲ, ಉಪ್ಪು ಸೇರಿಸಿ ಮಾಡಿರುವ ರಸಮೇವು ನೂರಾರು ಬ್ಯಾಗ್‌ಗಳು ಯಾವಾಗಲೂ ತೋಟದಲ್ಲಿರುತ್ತವೆ. ಕುರಿಗಳ ಜೊತೆಯಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಅದರಿಂದಲೂ ಆದಾಯ ಪಡೆಯುತ್ತಿದ್ದಾರೆ.

ಮಾರುತಿ ಮೌರ್ಯ ಕುರಿ ಸಾಕಾಣಿಕೆಯಲ್ಲಿ ಮಾಡಿರುವ ಸಾಧನೆಯನ್ನ ಪರಿಗಣಿಸಿ ಕರ್ನಾಟಕ ಸರ್ಕಾರವು ಕೊಡಮಾಡುವ ರಾಜ್ಯ ‘ಶ್ರೇಷ್ಠ ಪಶುಪಾಲಕ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನವದೆಹಲಿಯ ಭಾರತ ಸರ್ಕಾರದ ಐಸಿಎಆರ್‌ದ ‘ನ್ಯಾಶನಲ್‌ ಬಿಲಿಯನರ್ಸ್‌ ಫಾರ್ಮಸ್‌ ಆಪ್‌ ಇಂಡಿಯಾ 2023’ಪ್ರಶಸ್ತಿಯನ್ನು ಪಡೆಕೊಂಡಿದ್ದಾರೆ. ಜಿಲ್ಲಾ, ತಾಲ್ಲೂಕಾ ಮತ್ತು ವಿವಿಧ ಸಂಘ, ಸಂಸ್ಥೆಗಳ ಹಲವಾರು ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಮಾರುತಿ ಮರ್ಡಿ ಮೌರ್ಯ ಕುರಿ ಫಾರ್ಮದ ನೋಟ
ಮಾರುತಿ ಮರ್ಡಿ ಮೌರ್ಯ ಕುರಿ ಫಾರ್ಮದ ನೋಟ
ಮಾರುತಿ ಮರ್ಡಿ ಮೌರ್ಯ
ಮಾರುತಿ ಮರ್ಡಿ ಮೌರ್ಯ

Quote - ಅಧಿಕ ಇಳುವರಿ ನೀಡುವ ನಾರಿ ಸುವರ್ಣ ತಳಿಯ ಕುರಿ ನನ್ನ ಕೈಹಿಡಿದಿದೆ. ಒಂದೊಂದು ಕುರಿ ತ್ರಿವಳಿ ಅವಳಿ ಮರಿಗಳಿಗೆ ಜನ್ಮ ನೀಡುವುದರಿಂದ ಉತ್ತಮ ಆದಾಯವಿದೆ. ಪೇಟೆಯಲ್ಲಿ ಒಂದು ಕುರಿಗೆ ₹25 ರಿಂದ ₹30 ಸಾವಿರ ಬೆಲೆ ಇದೆ. ಸರ್ಕಾರವು ಸಹ ಈ ತಳಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಲಿದೆ ಮಾರುತಿ ಮರ್ಡಿ ಮೌರ್ಯ ರೈತ

Cut-off box - ಸಂಪನ್ಮೂಲ ವ್ಯಕ್ತಿ ಕುರಿ ಸಾಕಾಣಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಾರುತಿ ಸದ್ಯ ರಾಜ್ಯದ 350 ಕುರಿ ಆಡು ಸಾಕಾಣಿಕೆ ಫಾರ್ಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡಿಯನ್‌ ಫೈನಾನ್ಸಿಯಲ್‌ ಮ್ಯಾಪ್‌ಮತ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್‌ ಆಗಿದ್ದಾರೆ. ಕಲ್ಲೋಳಿಯಲ್ಲಿ ರಾಯಣ್ಣ ಆಡು ಕುರಿ ರೈತ ಉತ್ಪಾದಕರ ಸಂಸ್ಥೆ ಪ್ರಾರಂಭಿಸಿದ್ದು ಅದರ ಮೂಲಕ ಕುರಿಗಾರಿಕೆಗೆ ಸಂಬಂಧಿಸಿದ ಎಲ್ಲ ಸಂಗತಿಗಳ ಮಾರಾಟ ಮತ್ತು ಸರ್ಕಾರದ ಯೋಜನೆಗಳ ಮಾಹಿತಿಗಳನ್ನು ನೀಡುವರು. ಮಾಹಿತಿ ಪಡೆಯಲು ಇಚ್ಛಿಸುವವರು 99009 91196 ನಂಬರಿಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT