ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರದ್ಧಾ ಸೊಸೈಟಿ: ₹ 1.11 ಕೋಟಿ ಲಾಭ

ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾಹಿತಿ
Published : 16 ಸೆಪ್ಟೆಂಬರ್ 2024, 14:29 IST
Last Updated : 16 ಸೆಪ್ಟೆಂಬರ್ 2024, 14:29 IST
ಫಾಲೋ ಮಾಡಿ
Comments

ನಿಪ್ಪಾಣಿ: ‘ನಮ್ಮ ಸಹಕಾರ ಸಂಘವು ₹ 100 ಕೋಟಿ ಠೇವು ಸಂಗ್ರಹದ ಸಮೀಪವಿದೆ. ಶೀಘ್ರದಲ್ಲೇ ₹ 125 ಕೋಟಿ ಠೇವು ದಾಟಲು ಪ್ರಯತ್ನಿಸಲಿದ್ದೇವೆ’ ಎಂದು ಸ್ಥಳೀಯ ಶ್ರದ್ಧಾ ಕ್ರೆಡಿಟ್‌ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸ್ಥಳೀಯ ವಿಎಸ್‍ಎಂ ಸಭಾಭವನದಲ್ಲಿ ಭಾನುವಾರ ನಡೆದ ಸಂಘದ 25ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘2024 ಮಾರ್ಚ್ ಕೊನೆಯವರೆಗೆ ₹ 66.02 ಕೋಟಿ ಠೇವು ಸಂಗ್ರಹಿಸಿ ₹ 45.82 ಕೋಟಿ ಸಾಲ ವಿತರಿಸಲಾಗಿದೆ. ಆರ್ಥಿಕ ವರ್ಷದಲ್ಲಿ ₹ 1.11 ಕೋಟಿ ಲಾಭವಾಗಿದ್ದು ಶೇ 15ರಷ್ಟು ಲಾಭಾಂಶ ಸದಸ್ಯರಿಗೆ ವಿತರಿಸಲಿದ್ದೇವೆ. ಒಟ್ಟು ₹ 6.49 ಕೋಟಿ ವಿವಿಧ ನಿಧಿಗಳನ್ನು ಕಾಯ್ದಿರಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಈಚೆಗೆ ಕಾಗವಾಡದಲ್ಲಿ ಹೊಸ ಶಾಖೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ, ಶಿರಗುಪ್ಪಿ, ಅಥಣಿ, ಹುಬ್ಬಳ್ಳಿ ಮತ್ತು ಗದಗನಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಿದ್ದೇವೆ. ಜ. 1ರಿಂದ ಕೋರ್ ಬ್ಯಾಂಕಿಂಗ್‌ ವ್ಯವಸ್ಥೆ ಅಳವಡಿಸಿ ಉನ್ನತ ಸೇವೆಗಳನ್ನು ಗ್ರಾಹಕರಿಗೆ ನೀಡಲಾಗುವುದು’ ಎಂದರು.

ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಸಂಚಾಲಕ ಸಂಜಯ ಶಿಂತ್ರೆ, ಅಧ್ಯಕ್ಷತೆ ವಹಿಸಿದ್ದ ಹಾರೂಗೇರಿ ಶಾಖೆಯ ಉಪಾಧ್ಯಕ್ಷ ಪ್ರಭುಲಿಂಗ ಪಾಲಭಾವಿ, ಹಾರೂಗೇರಿ ಶಾಖೆಯ ಅಧ್ಯಕ್ಷ ಹಣಮಂತ ಯಲಶೆಟ್ಟಿ, ಅಭಿಷೇಕ ಪಾಟೀಲ, ಅಶೋಕ ಬುರ್ಗೆ ಮಾತನಾಡಿದರು.

ಆರಂಭದಲ್ಲಿ ಚಿಕ್ಕೋಡಿ ಶಾಖೆಯ ವ್ಯವಸ್ಥಾಪಕಿ ರೂಪಾಲಿ ಧಾರವಾಡ ಪ್ರಾರ್ಥನಾ ಗೀತೆ ಹಾಡಿದರು. ಎಲ್ಲ ಶಾಖೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಶಿವಮೂರ್ತಿ ಸ್ವಾಮಿ, ಸಂಚಾಲಕ ರಾವಸಾಹೇಬ ಪಾಟೀಲ, ಪಪ್ಪು ಪಾಟೀಲ, ಸಿದ್ಧಗೊಂಡ ಪಾಟೀಲ, ಸಂಚಾಲಕ ರಾಜಶೇಖರ ಹಿರೆಕೊಡಿ, ಧನಂಜಯ ಮಾನವಿ, ದಯಾನಂದ ಕೋಠಿವಾಲೆ, ನರಸಗೊಂಡಾ ಪಾಟೀಲ, ಶ್ರೀರಾಮ ಭಾರಮಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT