ಒಂದು ಕಾಲಕ್ಕೆ ಕರ್ನಾಟಕ ಪ್ರಗತಿಪರ ರಾಜ್ಯವಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಇಂದು ಹಿಂದುಳಿದ ರಾಜ್ಯವಾಗಿದೆ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ಕಾಂಗ್ರೆಸ್ ಸರ್ಕಾರದಲ್ಲಿ ಶೇ 60ರಷ್ಟು ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ದ ನಮ್ಮ ಹೋರಾಟ ನಿರಂತರವಾಗಿರಲಿದೆ
ಗೋವಿಂದ ಕಾರಜೋಳ, ಸಂಸದ
ಜನಾಕ್ರೋಶ ಯಾತ್ರೆ ಸಿದ್ದರಾಮಯ್ಯ ಅವರಲ್ಲಿ ನಡುಕ ಹುಟ್ಟಿಸಿದೆ. ಅವರ ಸ್ಥಾನಕ್ಕೆ ಕಾಂಗ್ರೆಸ್‌ನವರೇ ಇಟ್ಟಿರುವ ಬಾಂಬ್ ಯಾವಾಗ ಸ್ಪೋಟವಾಗುತ್ತದೆಯೋ ಗೊತ್ತಿಲ್ಲ. ಇಂದು ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಕೊನೇ ದಿನಗಳನ್ನು ಎಣಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಾದು ನಿಂತಿದ್ದಾರೆ
ಜಗದೀಶ ಶೆಟ್ಟರ್, ಸಂಸದ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವೇ ನಿಶ್ಚಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಬರೆದುಕೊಡುತ್ತೇನೆ. ಈಗಿನ ಸರ್ಕಾರ ಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು
ಬಾಲಚಂದ್ರ ಜಾರಕಿಹೊಳಿ, ಶಾಸಕ
ಜಾತಿ ಗಣತಿ ವರದಿಯಲ್ಲಿ ನೇಕಾರರು, ಮರಾಠ ಮತ್ತು ಜೈನ ಸಮುದಾಯದವರ ಬಗ್ಗೆ ಉಲ್ಲೇಖವೇ ಇಲ್ಲ. ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಅಭಿವೃದ್ಧಿಯ ಗಂಗೆ ಹರಿಯುತ್ತಿತ್ತು. ಆದರೆ, ಇಂದು ಕಾನೂನುಬಾಹಿರ ಚಟುವಟಿಕೆಗಳೇ ನಡೆಯುತ್ತಿವೆ
ಅಭಯ ಪಾಟೀಲ, ಶಾಸಕ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಲಿಂಗಾಯತರ ವಿರುದ್ಧವೇ ಕೆಲಸ ಮಾಡಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ಲಾಠಿ ಚಾರ್ಜ್ ಮಾಡಿ, ಪಂಚಮಸಾಲಿ ಸಮಾಜಕ್ಕೆ ಅಪಮಾನ ಮಾಡಿದೆ. ಎಲ್ಲಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ