ಬೆಳಗಾವಿ: ಪಂಜಾಬಿನ ಬಟಿಂದಾ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ಯೋಧ ಹವಾಲ್ದಾರ ಜಗದೀಶ ಮನೋಹರ ಶಿಂಧೆ (40) ಮೃತಪಟ್ಟಿದ್ದು, ಪಾರ್ಥಿವ ಶರೀರವನ್ನು ಬುಧವಾರ ಸ್ವಗ್ರಾಮಕ್ಕೆ ತರಲಾಗುವುದು.

ಕಳೆದ 24 ವರ್ಷಗಳಿಂದ ಸೇವೆಯಲ್ಲಿದ್ದ ಯೋಧ ಜಗದೀಶ, ಇನ್ನು 4 ತಿಂಗಳಿಗೆ ಸೇವೆಯಿಂದ ನಿವೃತ್ತರಾಗುವವರಿದ್ದರು. ಪತ್ನಿ ಮತ್ತು ಇಬ್ಬರು ಪುತ್ರರು ಜಗದೀಶ ಅವರ ಜತೆಗೆ ಪಂಜಾಬದಲ್ಲಿ ವಾಸಿಸಿದ್ದರು. ಯೋಧನಿಗೆ ತಂದೆ, ತಾಯಿ, ಸೋದರ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.