ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಬೈಕ್‌ ಅಪಘಾತದಲ್ಲಿ ಸಾವು

Published 8 ಸೆಪ್ಟೆಂಬರ್ 2023, 14:18 IST
Last Updated 8 ಸೆಪ್ಟೆಂಬರ್ 2023, 14:18 IST
ಅಕ್ಷರ ಗಾತ್ರ

ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ, ಗುರುವಾರ ರಾತ್ರಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಥಣಿ ತಾಲ್ಲೂಕಿನ ನದಿ ಇಂಗಳಗಾಂವ ಗ್ರಾಮದ ಲಕ್ಷ್ಮಣ ಘೋರ್ಪಡೆ (23) ಮೃತರು. ಅವರೊಂದಿಗೆ ಇದ್ದ ಹಿಂಬದಿ ಸವಾರ, ಯೋಧ ಸತೀಶ ಘೋರ್ಪಡೆ ಗಂಭೀರವಾಗಿ ಗಾಯಗೊಂಡಿದ್ದು, ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ಲಕ್ಷ್ಮಣ ಘೋರ್ಪಡೆ, ಅರುಣಾಚಲ ಪ್ರದೇಶದ ಲೂಂಪು ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಯೋಧನ ಮೃತದೇಹವನ್ನು ದರೂರ ಗ್ರಾಮದಿಂದ ನದಿ ಇಂಗಳಗಾಂವ ಗ್ರಾಮದವರೆಗೆ ವಾಹನದ ಮೂಲಕ ಮೆರವಣಿಗೆ ನಡೆಸಲಾಯಿತು. ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಮಹೇಶ ಕುಮಠಳ್ಳಿ, ಯುವ ಮುಖಂಡರಾದ ಚಿದಾನಂದ ಸವದಿ, ಶಶಿಕಾಂತ ಪಡಸಲಗಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT