ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 20 ಗ್ರೇಸ್ ಅಂಕ ನೀಡಲು ಆಗ್ರಹ

Last Updated 2 ಜುಲೈ 2020, 13:50 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕದ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕನ್ನಡ ವಿಷಯದ ಉತ್ತರಪತ್ರಿಕೆಗಳನ್ನು ಈ ಭಾಗದ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸಬೇಕು’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ ಸದಸ್ಯ ಇಬ್ರಾಹಿಂ ಎಂ. ಶಂಷೀರ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ‘ವಿವಿಧ ಭಾಷಿಕರು ಇಲ್ಲಿದ್ದಾರೆ. ಹೀಗಾಗಿ, ಕನ್ನಡದಲ್ಲಿ ಶುದ್ಧ ವ್ಯಾಕರಣ ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ದಕ್ಷಿಣದವರನ್ನು ನಿಯೋಜಿಸಬಾರದು’ ಎಂದು ಕೋರಿದ್ದಾರೆ.

‘ಕೋವಿಡ್–19 ಸಂಕಷ್ಟ ಇರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ತೊಂದರೆ ಆಗಿರುವುದರಿಂದಾಗಿ ಎಲ್ಲರಿಗೂ 20 ಗ್ರೇಸ್ ಅಂಕಗಳನ್ನು ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT