ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸತ್ಕಾರ

Published 10 ಮೇ 2024, 15:06 IST
Last Updated 10 ಮೇ 2024, 15:06 IST
ಅಕ್ಷರ ಗಾತ್ರ

ಹುಕ್ಕೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 60.73 ರಷ್ಟು ಫಲಿತಾಂಶ ಬಂದಿದೆ ಎಂದು ಬಿಇಒ ಪ್ರಭಾವತಿ ಪಾಟೀಲ ತಿಳಿಸಿದರು.

ತಾಲ್ಲೂಕಿಗೆ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶುಕ್ರವಾರ ಸತ್ಕರಿಸಿ ಅವರು ಮಾತನಾಡಿದರು.

ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ತಾಲ್ಲೂಕಿನಲ್ಲಿ ಮೊದಲ ಮೂರು ಸ್ಥಾನವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದರು. ಅತ್ಯುನ್ನತ (ಡಿಸ್ಟಿಂಕ್ಷನ್) ದರ್ಜೆಯಲ್ಲಿ 409, ಪ್ರಥಮ ಶ್ರೇಣಿಯಲ್ಲಿ 1776, ದ್ವಿತೀಯ ಶ್ರೇಣಿಯಲ್ಲಿ 1159, ತೃತೀಯ ದರ್ಜೆಯಲ್ಲಿ 777 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಯನ್ನು 6773 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 4113 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 3,501 ಬಾಲಕರ ಪೈಕಿ 1,707 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 48.30 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಎದುರಿಸಿದ 3272 ಬಾಲಕಿಯರ ಪೈಕಿ 2,406 ಪಾಸಾಗಿ ಶೇ 73.53ರಷ್ಟು ಪಾಸಾಗಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮೆರಿಟ್ ವಿದ್ಯಾರ್ಥಿಗಳು: ತಾಲ್ಲೂಕಿಗೆ ಶಿರಢಾಣ ಡಾ.ಗಂಗಾಧರ ಇಂಗ್ಲಿಷ್‌ ಮಾಧ್ಯಮ ವಸತಿ ಪ್ರೌಢ ಶಾಲೆಯ ಪ್ರಜ್ವಲ ವಡೇರ ಶೇ 98.88 (ಪ್ರಥಮ), ಬೆಲ್ಲದ ಬಾಗೇವಾಡಿ ಭರತೇಶ ಪ್ರೌಢ ಶಾಲೆಯ ವಿಠ್ಠಲ್ ಸಿ. ಹೆಗ್ಗನ್ನವರ ಶೇ 98.40 ಮತ್ತು ಯಾದಗೂಡ ಎಸ್‌ಎಲ್‌ಬಿಎಸ್ ಪ್ರೌಢಶಾಲೆಯ ಪ್ರತಿಭಾ ಮಲಗೌಡ ಪಾಟೀಲ ಶೇ.98.40 ಅಂಕಗಳ ಸಮಬಲದೊಂದಿಗೆ ದ್ವಿತೀಯ ಹಾಗೂ ಸಂಕೇಶ್ವರ ಸಮೀಪದ ಹರಗಾಪುರಗಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಜೀವಿನಿ ದುಂ.ಶಿವಾಪುರ ಶೇ 97.92 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಬಿಆರ್ಸಿ ಎ.ಎಸ್.ಪದ್ಮನ್ನವರ, ಪಿಇಒ ರವೀಂದ್ರ ಶೆಟ್ಟಿಮನಿ, ನೋಡಲ್ ಅಧಿಕಾರಿ ರಾಜೇಶ್ ಘಸ್ತಿ, ಶಿಕ್ಷಣ ಸಂಯೋಜಕರಾದ ಪ್ರೀತಮ್ ನಿಡಸೋಸಿ, ರಾಜೇಂದ್ರ ನಡಮನಿ, ಗೋವಿಂದ್ ದಿಕ್ಷೀತ್, ಬಿ.ಆರ್.ಪಿ. ಸುಮಾ ಮಡಿವಾಳರ, ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ರಾಮಚಂದ್ರ ಆರೇರ್ ಇದ್ದರು.

ಹುಕ್ಕೇರಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಿಇಒ ಪ್ರಭಾವತಿ ಪಾಟೀಲ್ ಶುಕ್ರವಾರ ಸತ್ಕರಿಸಿದರು.
ಹುಕ್ಕೇರಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಿಇಒ ಪ್ರಭಾವತಿ ಪಾಟೀಲ್ ಶುಕ್ರವಾರ ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT