ಬೈಲಹೊಂಗಲ: ರೈತರ ಕಬ್ಬು ಬೆಳೆಗೆ ದರ ನಿಗದಿ ಮಾಡಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಪ್ರವೀಣ ಜೈನ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ, ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹಾಂತೇಶ ಕಮತ ಮಾತನಾಡಿ, ‘ರೈತರು ಬೆಳೆ ಬೆಳೆಯಲು ಮಾಡಿದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೆಡೆಯಾದರೆ, ನಾಲ ನೀಡಿದ ಬ್ಯಾಂಕ್ ಅಧಿಕಾರಿಗಳು ರೈತರ ಸಾಲ ವಸೂಲಾತಿಗೆ ನೋಟಿಸ್ ನೀಡಿ ಕಬ್ಬು ಬೆಳೆಗಾರನ್ನು ಸತಾಯಿಸುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಎಫ್.ಆರ್.ಪಿ ಒಪ್ಪುವುದಿಲ್ಲ, ಅದು ಅವೈಜ್ಞಾನಿಕವಾಗಿದೆ’ ಎಂದರು.

‘ಮಹಾರಾಷ್ಟ್ರ, ಗುಜರಾತ, ಮಾದರಿಯಲ್ಲಿ ರಾಜ್ಯದ ಕಬ್ಬು ಬೆಳಗಾರರಿಗೆ ಪ್ರತಿ ಟನ್ ಕಬ್ಬಿಗೆ ₹4500ರೂ ನೀಡುವಂತೆ ಬೆಳಗಾವಿ ಮಹಾ ನಗರದಲ್ಲಿರುವ ಸಕ್ಕರೆ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ₹3500ನೀಡಬೇಕೆಂದು ಆಗ್ರಹಿಸಿದಾಗ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗಳು ದರ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸುವ ಭರವಸೆ ನೀಡಿದ್ದರು. ಆದರೆ ಇಂದು ಕಾರ್ಖಾನೆ ಮಾಲೀಕರ ಲಾಭಿಗೆ ಸರ್ಕಾರ ಮತ್ತು ಅಧಿಕಾರಿಗಳು ಮಣಿದು ದರ ನಿಗದಿ ಮಾಡದೆ ಕಾರ್ಖಾನೆ ನಿಗದಿತ ದಿನಾಂಕ ಆದೇಶ ಮಾರ್ಪಾಡು ಮಾಡಿ, ಮೊದಲೇ ಪ್ರಾರಂಭ ಮಾಡಿದ್ದಾರೆ. ರೈತರ ಅನಕೂಲಕ್ಕಾಗಿ ಕಾರ್ಖಾನೆ ಪ್ರಾರಂಭವಾಗಲಿ. ಆದರೆ ನಿಗದಿತ ₹3,500 ದರ ನಿಗದಿ ಮಾಡಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಶಿವಾನಂದ ಸರ್ದಾರ, ಸುರೇಶ ಸಂಪಗಾಂವ, ಕೆ.ಆರ್.ಎಸ್.ಪಾರ್ಟಿ ಗೌರವ ಅಧ್ಯಕ್ಷ ಸಿದ್ದು ಕನಬರ್ಗಿ, ‘ಸಕ್ಕರೆ ಸಚಿವರು ದಿಟ್ಟ ನಿರ್ಧಾರ ತಗೆದುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರು, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರ ಸಭೆಯನ್ನು ತಕ್ಷಣ ಕರೆದು ಕಬ್ಬು ದರವನ್ನು₹3500 ನಿಗದಿ ಮಾಡಿ ರೈತರಿಗೆ ನ್ಯಾಯ ನೀಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರೈತರಾದ ಬಸವರಾಜ ಬೆಳವಡಿ, ಜ್ಞಾನೇಶ್ವರ ಮಡಿವಾಳರ, ಮಲ್ಲಿಕಾರ್ಜುನ ಜಳ್ಳಿ, ಅಶೋಕ ಮಬನೂರ, ಅಡಿವೆಪ್ಪ ಅಬ್ಬಾಯಿ, ಸಂತೋಷ ರೇಣಕೆ, ಮಂಜುನಾಥ ಪತ್ತಾರ, ಫಕ್ಕೀರಪ್ಪ ತೋಟಗಿ, ಸಂಗಪ್ಪ ಬಶೆಟ್ಟಿ, ಮೂಗಪ್ಪ ಅಂಗಡಿ, ಈರಣ್ಣಾ ಅಬ್ಬಾಯಿ, ಸಿದ್ದಪ್ಪ ವಡ್ಡರಾಮನವರ, ಇತರರು ಇದ್ದರು.

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

ಮೂಡಲಗಿ: ಟನ್ ಕಬ್ಬಿಗೆ ಪ್ರಾರಂಭದಲ್ಲಿ ₹3500 ಬೆಲೆ ನಿರ್ಧರಿಸಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸತೀಶ ಶುಗರ್ಸ್ ಸಕ್ಕರೆ ಕಾರ್ಖಾನೆಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯಿಂದ ಇತ್ತಿಚೆಗೆ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿದ್ದ ರೈತರು ಸಂಗನಕೇರಿ ಕ್ರಾಸ್ದಿಂದ ಜಾಥಾ ಹೊರಟು ಹುಣಶ್ಯಾಳ ಪಿಜಿ ಸತೀಶ ಶುಗರ್ಸ್ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು. ನವಂಬರ್ 1ಕ್ಕೆ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದ್ದನ್ನು ಏಕಾಏಕಿ ಆದೇಶವನ್ನು ಮರಳಿ ತೆಗೆದುಕೊಂಡು ಅ. 20ರಂದು ಕಾರ್ಖಾನೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದು ರೈತರ ಮತ್ತು ರೈತ ಸಂಘಗಳ ಮಧ್ಯದಲ್ಲಿ ಜಗಳ ಹಚ್ಚಿದಂತಾಗಿದೆ ಎಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಥಳಕ್ಕೆ ಬಂದು ಕಬ್ಬಿಗೆ ದರವನ್ನು ಘೋಷಣೆ ಮಾಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ರಾಜ್ಯ ಘಟಕದ ಅಧ್ಯಕ್ಷ ಚುನಪ್ಪ ಪೂಜೇರಿ ಸತ್ಯಪ್ಪ ಮಲ್ಲಾಪುರ ಶ್ರೀಶೈಲ್ ಅಂಗಡಿ ಪಟ್ಟು ಹಿಡಿದರು. ಸತೀಶ ಶುಗರ್ಸ್ದ ಹಣಕಾಸು ವಿಭಾಗದ ಉಪಾಧ್ಯಕ್ಷ ದಿಲೀಪ ಪವಾರ ಹಿರಿಯ ಉಪಾಧ್ಯಕ್ಷ ಪಿ.ಡಿ. ಹಿರೇಮಠ ತಾಂತ್ರಿಕ ವಿಭಾಗದ ವೀರು ತಳವಾರ 2025–26ನೇ ಹಂಗಾಮಿಗೆ ಇನ್ನುವರೆಗೆ ಕಾರ್ಖಾನೆ ಪ್ರಾರಂಭಿಸಿಲ್ಲ. ಕಬ್ಬಿನ ಬೆಲೆ ನಿಗದಿಪಡಿಸಿದ ಮೇಲೆ ಕಾರ್ಖಾನೆ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ತಹಶೀಲ್ದಾರ್ ಶಿವಾನಂದ ಬಬಲಿ ಹಾಗೂ ಪೊಲೀಸ್ ಅಧಿಕಾರಿಗಳು ರೈತ ಮುಖಂಡರಾದ ರಮೇಶ ಕಾಲಾರ ಪಾಂಡು ಬೀರನಗಡ್ಡಿ ಮಹೇಶ ಸುಬೇದಾರ ಮಲ್ಲಪ್ಪ ಅಂಗಡಿ ಈರಣ್ಣ ಸಸಾಲಟ್ಟಿ ಕುಮಾರ ಮರಡಿ ದಶರಥ ನಾಯಕ ಪದ್ಮಾನ ಉಂದ್ರಿ ರವಿ ನುಚ್ಚುಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.