ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ನಿರ್ವಹಣೆ, ಕಬ್ಬಿನಲ್ಲಿ ಹೊಸ ತಳಿಗಳು ಮತ್ತು ಅವುಗಳ ಗುಣಲಕ್ಷಣಗಳ ವಿಷಯದ ಕುರಿತು ರೈತರಿಗೆ ಒಂದು ದಿನದ ವಿಚಾರ ಸಂಕಿರಣ ಜರುಗಿತು.

ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ. ಹಿರೇಮಠ, ಉಪಾಧ್ಯಕ್ಷ ದಿಲೀಪ ಪವಾರ ವಿಚಾರ ಸಂಕಿರವನ್ನು ಉದ್ಘಾಟಿಸಿದರು. ಕಬ್ಬಿನ ಬೆಳೆಯಲ್ಲಿನ ಹೊಸ ತಳಿಗಳು, ಅವುಗಳ ಗುಣಲಕ್ಷಣ, ಕಬ್ಬಿನ ಬೆಳೆಗೆ ನೀರು, ಗೊಬ್ಬರ, ಕಳೆಗಳ ನಿರ್ವಹಣೆ ಕುರಿತು ಮಾತನಾಡಿದರು.

‘ರೈತರು ಸರಿಯಾದ ಕಬ್ಬಿನ ಬೀಜದ ತಳಿ ಆಯ್ಕೆ ಮಾಡಿಕೊಳ್ಳಬೇಕು, ಕನಿಷ್ಠ 12ರಿಂದ 14 ತಿಂಗಳಿಗೆ ಕಬ್ಬು ಕಟಾವು ಮಾಡಬೇಕು. ಸಮಗ್ರ ಪೋಷಕಾಂಶ ನೀಡುವುದು, ರೋಗ ನಿರೋಧಕ ಕ್ರಮ ತೆಗೆದುಕೊಳ್ಳುವ ಮೂಲಕ ಕಬ್ಬಿನ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ’ ಎಂದರು.

ಪ್ರಗತಿಪರ ರೈತರಾದ ಶಿರಹಟ್ಟಿಯ ಶಿವಾನಂದ ಡಂಗ, ಬೆಲ್ಲದ ಬಾಗೇವಾಡಿಯ ಸುಧೀರ ಕತ್ತಿ, ಕಾರ್ಖಾನೆಯ ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮತ್ತು ಕಬ್ಬು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಸಾಲಟ್ಟಿ ಮಾತನಾಡಿದರು. ಕಾರ್ಖಾನೆಯ ಹಿರಿಯ ವ್ಯವಸ್ಥಾಪಕ ಲಕ್ಷ್ಮ ರೊಡ್ಡನವರ, ಸಹಾಯಕ ವ್ಯವಸ್ಥಾಪಕ ಪರವಯ್ಯಾ ಪೂಜೇರಿ, ಉಪ ವ್ಯವಸ್ಥಾಪಕ ನಿಂಗಪ್ಪ ರಡರಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.