ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಟೇಬಲ್‌ ಟೆನ್ನಿಸ್‌: ಚಾಂ‍ಪಿಯನ್‌ ಆದ ಹೆಸ್ಕಾಂ ಎಂಜಿನಿಯರ್‌

Published 6 ಜುಲೈ 2023, 13:46 IST
Last Updated 6 ಜುಲೈ 2023, 13:46 IST
ಅಕ್ಷರ ಗಾತ್ರ

ಬೆಳಗಾವಿ: ಅಹಮದಾಬಾದ್‍ನಲ್ಲಿ ಈಚೆಗೆ ನಡೆದ ಪ್ಯಾರಾ ಟೇಬಲ್ ಟೆನ್ನಿಸ್ ನ್ಯಾಷನಲ್‌ ರ್‍ಯಾಂಕಿಂಗ್‌ ಚಾಂಪಿಯನ್‍ಶಿಪ್‌ನ ಎಂಎಸ್–7 ವಿಭಾಗದಲ್ಲಿ ಬೆಳಗಾವಿಯ ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸಂಜೀವ್ ಹಮ್ಮಣ್ಣವರ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಷನ್ ಹಾಗೂ ಸ್ಪೋರ್ಟ್ಸ್‌ ಕ್ವಾಲಿಟಿ ಆಫ್ ಇಂಡಿಯಾ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ಸಂಜೀವ್ ಅವರು ಡಾ.ನಾಜಿಮ್ ಅವರನ್ನು 3-1 ಸೆಟ್‍ಗಳಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಪಡೆದುಕೊಂಡರು.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಂಜೀವ್ ಅವರು ದೆಹಲಿಯ ಶಾರಿಕ್ ನಯೀಮ್ ಅವರನ್ನು ಹಾಗೂ ಸೆಮಿ ಫೈನಲ್ ಪಂದ್ಯದಲ್ಲಿ ದೆಹಲಿಯ ಅನ್ಸುಲ್ ಅಗರವಾಲ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು.

ಮಿಕ್ಸ್ಡ್‌ ಡಬ್ಬಲ್ಸ್‌ನಲ್ಲೂ ವಿಜಯ: ಕ್ರೀಡಾಕೂಟದ ಮಿಕ್ಸ್ಡ್‌ ಡಬ್ಬಲ್ಸ್‌ನ ಅಂತಿಮ ಪಂದ್ಯದಲ್ಲಿ ಸಂಜೀವ ಹಮ್ಮಣ್ಣವರ್ ಹಾಗೂ ಮಾಯವ್ವ ಅವರ ಜೋಡಿ ಗುಜರಾತದ ಯಜಡಿ ಬಾಮಗಾರ್ ಮತ್ತು ನೂರ್‌ಜಾನ್ ಅವರ ಜೋಡಿಯನ್ನು 3-2 ಅಂತರದಲ್ಲಿ ಮಣಿಸಿ ಬಂಗಾರದ ಪದಕಕ್ಕೆ ಭಾಜನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT