ಶನಿವಾರ, ಆಗಸ್ಟ್ 13, 2022
23 °C

‘ಸಪ್ತರ್ಷಿಗಳು ಶಿಕ್ಷಕರಿಗೆ ಮಾದರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೆಎಲ್‌ಇ ಸಂಸ್ಥೆ ಸ್ಥಾಪಿಸಿದ ಸಪ್ತರ್ಷಿಗಳ ಕಾರ್ಯ, ಆದರ್ಶ ಗುಣಗಳು ಇಂದಿನ ಶಿಕ್ಷಕರಿಗೆ ಮಾದರಿಯಾಗಿವೆ’ ಎಂದು ಉಪಪ್ರಾಚಾರ್ಯ ಎಸ್.ಆರ್. ಗದಗ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಜಿ.ಎ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಆರ್.ಎಂ. ಮಗದುಮ್ಮ ಮಾತನಾಡಿದರು. ಪ್ರಾಚಾರ್ಯ ರವೀಂದ್ರ ಪಾಟೀಲ, ಕೆಎಲ್‌ಇ ಆಡಳಿತ ಮಂಡಳಿ ಸದಸ್ಯ ಮಹಾದೇವ ಬಳಿಗಾರ ಇದ್ದರು.

ಎಂ.ಎಸ್. ಮಗದುಮ್ಮ ಸ್ವಾಗತಿಸಿದರು. ಕೆ.ಆರ್. ಪಟ್ಟಣ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.