ಮೂಡಲಗಿ: ‘ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಒ ಅಜೀತ ಮನ್ನಿಕೇರಿ ಅವರ ಪಾತ್ರ ಗಣನೀಯವಾಗಿದ್ದು, ಈಗಿರುವ ಗುಣಮಟ್ಟದ ಶಿಕ್ಷಣ ಮುಂದುವರೆಸಿಕೊಂಡು ಹೋಗಬೇಕು ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೂತನ ಬಿಇಒ ಅವರಿಗೆ ಸಲಹೆ ನೀಡಿದರು.

ತಾಲ್ಲೂಕಿನ ತಿಗಡಿ ಗ್ರಾಮದ ಉನ್ನತೀಕರಣ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ಮೂಡಲಗಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮತ್ತು ವಿವಿಧ ಸಂಘಟನೆಯವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಾಸಕರಾರ ಮೇಲೆ 28 ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳನ್ನು ಮಂಜೂರ ಮಾಡಿಸಲಾಗಿದೆ. ಹಳ್ಳೂರ, ತುಕ್ಕಾನಟ್ಟಿ, ಖಂಡ್ರಟ್ಟಿ ಗ್ರಾಮಗಳಿಗೆ ಪ್ರಸಕ್ತ ವರ್ಷದಿಂದ ನೂತನವಾಗಿ ಸರ್ಕಾರಿ ಪ್ರೌಢಶಾಲೆಗಳನ್ನು ಪ್ರಾರಂಭಿಸಿದ್ದು ಸರ್ಕಾರದ ಷರತ್ತಿನಂತೆ ಈ ಮೂರು ಶಾಲೆಗಳ ಮೂರು ವರ್ಷಗಳ ವೆಚ್ಚವನ್ನು ಸ್ವತಃ ಭರಿಸವುದಾಗಿ ತಿಳಿಸಿದರು.

ಖಾಸಗಿ ಸಂಸ್ಥೆಗಳಿಗಿಂತ ಗುಣಮಟ್ಟದ ಶಿಕ್ಷಣಕ್ಕೆ ಮೂಡಲಗಿ ವಲಯವು ಗುರುತಿಸಿಕೊಂಡು ಎರಡು ಬಾರಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದು, ಫಲಿತಾಂಶದಲ್ಲಿ ಸಹ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಇಲ್ಲಿಯ ಸರ್ಕಾರಿ ಶಾಲೆಗಳಲ್ಲಿ 50 ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿರುವುದು ರಾಜ್ಯದಲ್ಲಿ 3ನೇ ಸ್ಥಾನ ಹೊಂದಿದೆ. ಇದು ಬಿಇಒ ಅಜಿತ ಮನ್ನಿಕೇರಿ ಅವರ ಅವಿರತ ಪರಿಶ್ರಮವಾಗಿದೆ ಎಂದರು.

ವಲಯದ ನಿವೃತ್ತ ಶಿಕ್ಷಕರು, ಆಯ್ಕೆಗೊಂಡ ಉತ್ತಮ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ವಿವಿಧ ಪ್ರತಿಷ್ಠಾನಗಳಿಂದ ಆಯ್ಕೆಯಾಗಿರುವ ಆದರ್ಶ ಶಿಕ್ಷಕರನ್ನು ಸನ್ಮಾನಿಸಿದರು.

ಮೂಡಲಗಿ ಬಿಇಒ ಹುದ್ದೆಯಿಂದ ಪದೋನ್ನತಿ ಹೊಂದಿ ಬಾಗಲಕೋಟೆ ಡಿಡಿಪಿಐ ಆಗಿ ಪದೋನ್ನತಿ ಪಡೆದಿರುವ ಅಜೀತ ಮನ್ನಿಕೇರಿ ಅವರನ್ನು ಶಾಸಕರು ₹2 ಕೆಜಿ ತೂಕದ ಬೆಳ್ಳಿಯ ಗಣೇಶನ ವಿಗ್ರಹ ನೀಡಿ ಸನ್ಮಾನಿಸಿದರು.

ಸುಣಧೋಳಿಯ ಶಿವಾನಂದ ಸ್ವಾಮೀಜಿ ಮಾತನಾಡಿದರು. ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಚಿಕ್ಕೋಡಿ ಡಿಡಿಪಿಐ ಸೀತಾರಾಮ ಆರ್.ಎಸ್, ಮೂಡಲಗಿ ತಹಶೀಲ್ದಾರ್ ಶ್ರೀಶೈಲ ಗುಡಮೆ, ಗೋಕಾಕ ತಹಶೀಲ್ದಾರ್ ಮೋಹನ ಭಸ್ಮೆ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಬಿ. ಹಿರೇಮಠ, ಎಫ್.ಜಿ.ಚಿನ್ನನ್ನವರ, ಆರ್.ಎಂ. ಮಠದ, ರೇರೇಣುಕಾ ಆನಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಎ.ಬಿ.ಮಲಬನ್ನವರ, ಸಿಪಿಐ ಶ್ರೀಶೈಲ್ ಬ್ಯಾಕೂಡ್, ಸಿಡಿಪಿಓ ಯಲ್ಲಪ್ಪ ಗದಾಡಿ ಇದ್ದರು. ಬಿಇಒ ಪಿ.ಬಿ. ಹಿರೇಮಠ ಸ್ವಾಗತಿಸಿದರು. ಬಸವರಾಜ ಮತ್ತು ಎ.ಪಿ. ಪರಸನ್ನವರ ನಿರೂಪಿಸಿದರು.

ನಿವೃತ್ತ ಶಿಕ್ಷಕರಿಗೆ ಸನ್ಮಾನ ಡಾ. ರಾಧಾಕೃಷ್ಣನ ಭಾವಚಿತ್ರದ ಮೆರವಣಿಗೆ 5 ಸಾವಿರ ಶಿಕ್ಷಕರು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.