ಭಾನುವಾರ, ಅಕ್ಟೋಬರ್ 24, 2021
21 °C

ತೆಲಸಂಗ: ಉರುಸ್‌ಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ಮತೀಯ ಭಾವನೆ ಹೋಗಲಾಡಿಸಿ ಸಹೋದರತ್ವ ಗಟ್ಟಿಗೊಳಿಸುವ ಗ್ರಾಮದ ಸಿಕಂದರ್‌ ಬಾದ್‌ಶಾ ದೇವರ ಉರುಸ್‌ ಸೌಹಾರ್ದಕ್ಕೆ ಸಾಕ್ಷಿಯಾಗಿದೆ’ ಎಂದು ಪೀರ್ ಸಿಕಂದರ್‌ ಬಾದ್‌ಶಾ ದರ್ಗಾ ಸಮಿತಿ ಅಧ್ಯಕ್ಷ ಹುಸೇನಸಾಬ ಮುಜಾವರ ಹೇಳಿದರು.

ಗ್ರಾಮದಲ್ಲಿ ಉರುಸ್‌ ನಿಮಿತ್ತ ಸುಣ್ಣ ಮತ್ತು ಗಂಧ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮವು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಪುಣ್ಯ ಭೂಮಿಯಲ್ಲಿ ಬಸವಣ್ಣನವರ ಕಾಲದಿಂದಲೂ ಸಾಧು–ಸಂತರು ಬಾಳಿ ಬೆಳಗಿ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿ ಹೋಗಿದ್ದಾರೆ. ಅವರ ನೀಡಿದ ಆದರ್ಶದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು’ ಎಂದರು.

‘ಪಟ್ಟಿ ಸಮಿತಿ’ ಅಧ್ಯಕ್ಷ ಮುರಿಗೆಪ್ಪ ಥೈಕಾರ ಮಾತನಾಡಿದರು. ಉಪಾಧ್ಯಕ್ಷ ಹುಸೇನಸಾಬ ಅಮೀನಸಾಬ ಮುಜಾವರ, ಸುರೇಶ ಜಮಖಂಡಿ, ರಾಮು ದೇಸಂಗಿ, ನಿಂಗಪ್ಪ ಬಿಜ್ಜರಗಿ, ನಿಂಗಪ್ಪ ದೊಡ್ಡಮನಿ, ಸದು ಬಿಜ್ಜರಗಿ, ಅಲ್ಲಾಪೀರ ಮುಜಾವರ, ಮಾದೇವ ಬಾಣಿ, ಲಾಲಸಾಬ ಮುಜಾವರ, ಸಂಗು ಕನ್ನೂರ, ಅಪ್ಪಾಸಾಬ ಮುಜಾವರ, ಅಮೀನ ಮುಜಾವರ, ಮೋದಿನ ಮುಜಾವರ, ರಸೂಲ್, ಹುಸೇನ್, ರಮೇಶ ಬಿಜ್ಜರಗಿ, ಇಲಾಹಿ, ಆದಮ್, ಶಕೀಲ, ಸಲೀಮ, ಬಸೀರ, ಅಸ್ಕರ, ರಾಜು, ಮಂಝು, ಆಕಾಶ, ಮೋಶೀನ, ಸದ್ದಾಮ, ನಿಯಾಜ್, ಆಸೀಫ ಮುಜಾವರ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.