ಗುರುವಾರ , ಫೆಬ್ರವರಿ 25, 2021
25 °C

ಬೆಳಗಾವಿ: ಮದ್ಯಕ್ಕಾಗಿ ನದಿ ಈಜಿ ಬಂದ ಕಂಟೈನ್ಮೆಂಟ್ ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೋಳೆ: ಕಂಟೈನ್ಮೆಂಟ್ ವಲಯದ ಕೆಲವರು ಸೋಮವಾರ ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರ ಕಣ್ತಪ್ಪಿಸಿ ಕಳ್ಳ ಮಾರ್ಗದಿಂದ ಬೇರೆ ಪ್ರದೇಶಗಳಿಗೆ ತೆರಳಿ ಮದ್ಯ ಖರೀದಿಸುತ್ತಿರುವುದು ಹೊಸ ಸಮಸ್ಯೆ ತಂದೊಡ್ಡಿದೆ ಎಂದು ಆರೋಪಿಸಲಾಗುತ್ತಿದೆ.

ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣವನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲಿಂದ ಜನರು ಹೊರ ಬಾರದಂತೆ ಉಗಾರ–ಕುಡಚಿ ಮಧ್ಯದಲ್ಲಿರುವ ರೈಲು ಹಳಿ ಹಾಗೂ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಆದರೆ, ಅಲ್ಲಿನ ಕೆಲವು ಮದ್ಯಪ್ರಿಯರು ಕೃಷ್ಣಾ ನದಿಯನ್ನು ಈಜಿ ಐನಾಪುರಕ್ಕೆ ಬಂದು ಮದ್ಯ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಇದು, ಐನಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಉಂಟು ಮಾಡಿದೆ. ಕೆಲವರು ನದಿಯಲ್ಲಿ ಈಜಿ ದುಸ್ಸಾಹಸ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿಗಾ ವಹಿಸಬೇಕು’ ಎಂದು ಐನಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು