ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭೂತಪೂರ್ವ ಬೆಂಬಲ; ಗೆಲವು ಖಚಿತ: ‌ಶಂಭು ಕಲ್ಲೊಳಿಕರ

Published 15 ಏಪ್ರಿಲ್ 2024, 14:29 IST
Last Updated 15 ಏಪ್ರಿಲ್ 2024, 14:29 IST
ಅಕ್ಷರ ಗಾತ್ರ

ಅಥಣಿ: ‘ನಾನು ಯಾರನ್ನು ಸೋಲಿಸಲು ಚುನಾವಣೆಗೆ ಸ್ಪರ್ಧಿಸಿಲ್ಲ. ಪ್ರಜ್ಞಾವಂತ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದು, ನನ್ನ ಗೆಲುವು ಖಚಿತ’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಹೇಳಿದರು.

ಭಾನುವಾರ ಅವರು ಪಟ್ಟಣದ ಸಿದ್ದೇಶ್ವರ ದೇವರ ದರ್ಶನ ಆಶೀರ್ವಾದ ಪಡೆದುಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈಗ ಎಲ್ಲೆಡೆ ಕುಟುಂಬ ರಾಜಕಾರಣ ಹಾಗೂ ಬಂಡವಾಳ ಶಾಹಿಗಳ ರಾಜಕಾರಣ ಅಧಿಕವಾಗಿದ್ದು, ನಿಷ್ಠಾವಂತ ಹಾಗೂ ಪ್ರಾಮಾಣಿಕ ಸಮಾಜ ಸೇವಕರಿಗೆ ಆದ್ಯತೆ ಇಲ್ಲದಂತಾಗಿದೆ. ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮತಗಳನ್ನು ಸೆಳೆಯಲು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂಬುದು ಕೆಲವು ಜನರ ತಪ್ಪು ಕಲ್ಪನೆಯಾಗಿದೆ’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಶಿ ಸಾಳ್ವೆ, ಅನೀಲ ಕಾಂಬಳೆ, ಮಿತೇಶ ಪಟ್ಟಣ,ಸಚೀನ ಪರಾಂಜಿಪೆ ಭೀಮು ಕಾಂಬಳೆ, ಅನೀಲ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT