ಬುಧವಾರ, ಡಿಸೆಂಬರ್ 8, 2021
18 °C

ವಚನಾಮೃತ: ನಂಬಿಕೆಯಿಂದ ದೇವರನ್ನು ಆರಾಧಿಸಿ

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ ಮಾಡದೆ ಮಾಣ್ಬನೆ?

ಜೇಡರ ದಾಸಯ್ಯಂಗೊಲಿದಾತ, ಮತ್ತೊಬ್ಬ ದೇವನೆ, ಅಯ್ಯಾ?

ಮಾದರ ಚನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,

ತೆಲುಗ ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ?

ತನ್ನತ್ತ ಮಾಡುವ ಕೂಡಲಸಂಗಮದೇವ.

ಭಗವಂತನ ಅನುಗ್ರಹವು ಪ್ರಾಪ್ತವಾಗಬೇಕಾದರೆ ನಮ್ಮಲ್ಲಿ ಸಮರ್ಪಣಾ ಮನೋಭಾವ ಇರಬೇಕಾಗುತ್ತದೆ. ನಿಷ್ಠೆಯಿಂದ ಸೇವೆ ಮಾಡುವ ಸೇವಕನಿಗೆ ರಾಜನಾದವನು ಯಾವ ಪದವಿಯನ್ನಾದರೂ ಕರುಣಿಸುತ್ತಾನೆ. ಭಕ್ತನಿಗೆ ಭಗವಂತನೇ ರಾಜನು. ಭಕ್ತಿಯಿಂದ ಭಗವಂತನ ಸೇವೆ ಮಾಡಿದರೆ ಯಾವುದೇ ಕೊರತೆ ಆಗದಂತೆ ಆತನು ನೋಡಿಕೊಳ್ಳುತ್ತಾನೆ. ಎಲ್ಲ ಶಿವಶರಣರಿಗೆ ಒಲಿದಾತ ಒಬ್ಬನೇ ದೇವರು. ಜೇಡರ ದಾಸಿಮಯ್ಯ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ತೆಲುಗು ಜೊಮ್ಮಯ್ಯ ಇವರೆಲ್ಲರಿಗೂ ಒಲಿದಾತನೇ ತನಗೂ ಒಲಿಯುತ್ತಾನೆ ಎಂಬ ಅಚಲ ನಂಬಿಕೆ ಬಸವಣ್ಣನವರಿಗೆ ಇದೆ. ಅಂತಹ ನಂಬಿಕೆಯನ್ನು  ಇಟ್ಟುಕೊಂಡು ಭಗವಂತನನ್ನು ಆರಾಧಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.