ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಅರಿಯುವ ದಾರಿ ತಿಳಿಯೋಣ

Last Updated 19 ಜನವರಿ 2022, 6:21 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟಡೆ

ನಿಮ್ಮ ನಗುವರಯ್ಯಾ

ಶಿವಬಟ್ಟೆಯಲೆನ್ನನಿರಿಸಯ್ಯಾ ಹರನೆ

ಹೊಲಬುಗೆಟ್ಟೆನು ಬಟ್ಟೆಯ ತೋರಯ್ಯಾ

ಹುಯ್ಯಲಿಟ್ಟೆನು ಗಣಂಗಳು ಕೇಳಿರಯ್ಯಾ

ಕೂಡಲಸಂಗಮದೇವಯ್ಯನೆನ್ನ ಕಾಡಿಹನಯ್ಯಾ!

ಜಗವೊಂದು ನಾಟಕ ರಂಗ. ಇಲ್ಲಿರುವ ಜೀವಿಗಳೆಲ್ಲ ಪಾತ್ರಧಾರಿಗಳು. ಭಗವಂತನು ಸೂತ್ರಧಾರಿ ಎಂಬ ಮಾತಿದೆ. ಬಸವಣ್ಣನವರ ಪ್ರಕಾರ ಮಾನವನ ಸೃಷ್ಟಿಗೆ ಭಗವಂತನೆ ಕಾರಣ. ಆದರೆ, ಮಾನವನು ಯಾವ ರೀತಿ ಜೀವಿಸಬೇಕು ಎನ್ನುವುದನ್ನು ಕೂಡ ಭಗವಂತನೆ ನಿರ್ಧರಿಸಬೇಕು. ಅದಕ್ಕೆ, ಹುಟ್ಟಿಸುವುದು ಮಾತ್ರ ಆತನ ಕರ್ತವ್ಯವಲ್ಲ; ಸರಿಯಾದ ಕ್ರಮದಲ್ಲಿ ಜೀವಿಸುವಂತೆ ಮಾಡುವುದು ಕೂಡ ಆತನ ಕೆಲಸವಾಗಿದೆ. ಪರಶಿವನ ಸಾಕ್ಷಾತ್ಕಾರ (ಶಿವ ಬಟ್ಟೆಯಲ್ಲಿರಿಸುವಂತೆ) ಆಗುವಂತೆ ಮಾಡುವ ಹೊಣೆಗಾರಿಕೆ ಕೂಡ ಅವನ ಮೇಲಿದೆ. ಭಗವಂತನನ್ನು ಅರಿಯುವ ದಾರಿ(ಹೊಲಬು)ಯನ್ನು ತಪ್ಪಿದ್ದೇನೆ. ಸರಿಯಾದ ಮಾರ್ಗ(ಬಟ್ಟೆ)ವನ್ನು ತೋರಿಸು. ಪರಶಿವನ ಪ್ರತಿನಿಧಿಗಳಾದ ಪ್ರಮಥಗಣಂಗಳೆ ಕೇಳಿರಿ, ಭಗವಂತನು ನನ್ನನ್ನು ಕಾಡುತ್ತಿದ್ದಾನೆ ಎಂದು ಬಸವಣ್ಣನವರು ತಮ್ಮ ನೋವನ್ನು ಇಲ್ಲಿ ಈ ವಚನದ ಮೂಲಕ ಅರಿಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT