ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳನ್ನು ಪಠ್ಯದ ಭಾಗವಾಗಿಸಬೇಕು: ಐಪಿಎಸ್ ಅಧಿಕಾರಿ ಡಿ.ರೂಪಾ ಅಭಿಮತ

Last Updated 3 ಮಾರ್ಚ್ 2021, 16:20 IST
ಅಕ್ಷರ ಗಾತ್ರ

ಗೋಕಾಕ: ‘ವಚನಗಳನ್ನು ಪಠ್ಯದ ಭಾಗವಾಗಿಸಬೇಕು’ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದರು.

ಇಲ್ಲಿನ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶೂನ್ಯ ಸಂಪಾದನಮಠದಿಂದ ಬುಧವಾರ ಆಯೋಜಿಸಿದ್ದ 16ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪುರುಷ ಮತ್ತು ಮಹಿಳೆ ಎಂಬ ತಾರತಮ್ಯವನ್ನು ಹೋಗಲಾಡಿಸಬೇಕು. ಪುರುಷರಷ್ಟೇ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾಳೆ’ ಎಂದರು.

‘ಮಕ್ಕಳಿಗೆ ಶಿಕ್ಷಣದ ಜೊತೆಗೆ ವಚನಗಳನ್ನು ಕಲಿಸಬೇಕು. ನಿಷ್ಠೆಯಿಂದ ಕೂಡಿದ ಕಾಯಕ ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ನಿಸ್ವಾರ್ಥ ಸೇವೆಯಿಂದ ಫಲ ಲಭಿಸುತ್ತದೆ. ಮೂಢನಂಬಿಕೆ ಮತ್ತು ಮೌಢ್ಯಗಳಿಂದ ಮಹಿಳೆ ಹೊರ ಬರಬೇಕು’ ಎಂದರು.

‘ಇಂದಿನ ಸಮಾಜದಲ್ಲಿ ನೈತಿಕತೆ ಮತ್ತು ಮೌಲ್ಯಗಳು ಕುಸಿಯುತ್ತಿವೆ. ಈ ವ್ಯವಸ್ಥೆ ಬದಲಾಗಬೇಕು. ಪ್ರಸ್ತುತ ಐಎಎಸ್-ಐಪಿಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದದ ಸಂಗತಿ. ಕಾಯಕದಲ್ಲಿ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು. ಎದೆ ಗುಂದಬಾರದು’ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ‘ಮೀಸಲಾತಿಗಾಗಿ ಹೋರಾಟ ಮಾಡದೆ ಸ್ವ ಸಾಮರ್ಥ್ಯದಿಂದ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಶ್ರೀಮಠವು ಶ್ರಮಿಸುತ್ತಿದೆ. ಸಮ-ಸಮಾಜದ ನಿರ್ಮಾಣದ ಹೋರಾಟ ಪ್ರಗತಿಯಲ್ಲಿದೆ’ ಎಂದರು.

‘ಭಾರತವೇ ಧರ್ಮ. ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದೆ’ ಎಂದು ತಿಳಿಸಿದರು.

ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಹೆಚ್ಚುವರಿ ಜಂಟಿ ನಿರ್ದೇಶಕಿ ಡಾ.ಶೈಲಜಾ ತಮ್ಮಣ್ಣವರ, ಡಾ.ನೀತಾ ದೇಶಪಾಂಡೆ, ಲಿಂಗಾಯತ ಮಹಿಳಾ ವೇದಿಕೆ ಅಧ್ಯಕ್ಷೆ ಶಕುಂತಲಾ ಕಟ್ಟಿ ಇದ್ದರು.

ಸಾಧಕರಾದ ಕೆಂಪವ್ವ ಹರಿಜನ, ಏಕಲವ್ಯ ಪ್ರಶಸ್ತಿ ವಿಜೇತೆ ಗೀತಾ ದಾನಪ್ಪಗೋಳ, ಪ್ರೇಮಾ ರಾಮಪ್ಪ ನಡಬಟ್ಟಿ, ಮೀನಾಕ್ಷಿ ಸವದಿ, ಸುಕಾತಾ ಪಡತರಿ, ದೀಪಾ ಬೆಲ್ಲದ, ಶಕುಂತಲಾ ಹಿರೇಮಠ, ಶೈಲಾ, ಅನಸೂಯಾ ಮಂಜುನಾಥ, ಗೀತಾ ಅಮರಶೆಟ್ಟಿ, ಮಹಾನಂದಾ ಗುಣಕಿ, ಗಿರಿಜಾ ಮುನ್ನೋಳಿಮಠ ಮತ್ತು ದಾಸೋಹಿಗಳಾದ ವೀಣಾ ಹಿರೇಮಠ ಮತ್ತು ಸುಸ್ಮಿತಾಕುಮಾರಿ ಕಿ.ಶೆಟ್ಟಿ(ಭಟ್ಟ) ಅವರನ್ನು ಸನ್ಮಾನಿಸಲಾಯಿತು.

ಧಾರವಾಡದ ಶರಣ ತತ್ವಸಾರ ರತಿಕಾ ನೃತ್ಯ ನಿಕೇತನ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಶಿಕ್ಷಕ ಎಸ್.ಕೆ. ಮಠದ ನಿರೂಪಿಸಿದರು. ಶಿಕ್ಷಕ ರಾಮಪ್ಪ ಮಿರ್ಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT