ಶುಕ್ರವಾರ, ಜುಲೈ 30, 2021
22 °C

ಹುಕ್ಕೇರಿ: ವಟಸಾವಿತ್ರಿ ವ್ರತ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ಪಟ್ಟಣದಲ್ಲಿ ಗುರುವಾರ ವಟ ಸಾವಿತ್ರಿ ವ್ರತವನ್ನು ಅರಳಿ ಮರಕ್ಕೆ ನೂಲು ಸುತ್ತುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ತಮ್ಮ ಗಂಡಂದಿರ ಆಯಸ್ಸು ಹೆಚ್ಚಾಗಲೆಂದು ದಿನವಿಡಿ ಉಪವಾಸವಿದ್ದು, ಕರಿಮಣಿ,ಎಲೆ, ಅಡಿಕೆ, ಅರಿಸಿಣ, ಬಾಳೆಹಣ್ಣು, ಕಡಲೆಕಾಳು ಸಮೇತ ಮಹಿಳೆಯರಿಗೆ ಉಡಿ ತುಂಬಿ ಆರತಿ ಬೆಳಗಿ ನಮಸ್ಕರಿಸಿದರು.

ಪಟ್ಟಣದಲ್ಲಿ ಕೆಲವು ಭಾಗಗಳಲ್ಲಿ ಗುರುವಾರ ವ್ರತ ಆಚರಿಸಲಾಯಿತು. ಬೈಪಾಸ್ ರಸ್ತೆಯ ಲಕ್ಷ್ಮೀ ಗುಡಿ ಬಳಿಯ ಆಲದ ಮರ, ಎಸ್.ಎಸ್.ಎನ್.ಕಾಲೇಜು ಆವರಣದಲ್ಲಿನ ಆಲದ ಮರ, ಬೈಪಾಸ್ ರಸ್ತೆಯ ಪಕ್ಕದ ಆಲದ ಮರಕ್ಕೆ ನೂರಾರು ಮಹಿಳೆಯರು ನೂಲು ಸುತ್ತಿ, ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.