ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಬೀಡಿ ತಂಡಕ್ಕೆ ಜಯ

Published 3 ಜನವರಿ 2024, 15:47 IST
Last Updated 3 ಜನವರಿ 2024, 15:47 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣದ ಸರ್ವೋದಯ ಪ್ರೌಢಶಾಲೆಯ ಮೈದಾನದಲ್ಲಿ ಖಾನಾಪುರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ಬೀಡಿ ಗ್ರಾಮದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ (ಎಫ್ಸಿಸಿ) ತಂಡ ಸನ್ ರೈಸರ್ಸ್ ಖಾನಾಪುರ ತಂಡ ಸೋಲಿಸಿ ಇರ್ಫಾನ್ ತಾಳಿಕೋಟಿ ಟ್ರೋಫಿ ಮತ್ತು ₹56,666 ನಗದು ಬಹುಮಾನ ತನ್ನದಾಗಿಸಿಕೊಂಡಿತು.

10 ಓವರ್‌ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಒಟ್ಟು 40 ತಂಡಗಳು ಭಾಗವಹಿಸಿದ್ದವು. ಮಂಗಳವಾರ ನಡೆದ ಫೈನಲ್ ಪಂದ್ಯಾವಳಿಯ ಬಳಿಕ ವಿಜೇತ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಖಾನಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮೋದಿನ್ ದಾವಣಗೆರೆ, ಮುಖಂಡರಾದ ಜೆ.ಎಂ. ನದಾಫ, ಸುರೇಶ ದೇಸಾಯಿ, ಲಿಯಾಕತಲಿ ಬಿಚ್ಚುನವರ, ಮುಜಫ್ಫರ್ ತೇಕಡಿ, ಎಂ.ಎ. ಇನಾಮದಾರ, ಅನೀಲ ಸುತಾರ, ಸಾವಿತ್ರಿ ಮಾದಾರ, ಅಶ್ರಫ್ ಹುದಲಿ, ಯಶವಂತ ಬಿರ್ಜಿ, ಪ್ರವೀಣ ಸುಳಕರ, ರವಿಸಾಗರ ಉಪ್ಪೀನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT