ಸೋಮವಾರ, ಆಗಸ್ಟ್ 2, 2021
23 °C

ಮತದಾರರು ಆಶೀರ್ವದಿಸುವ ನಂಬಿಕೆ ಇದೆ: ಸತೀಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಲೋಕಸಭಾ ಸದಸ್ಯ ದೆಹಲಿಯಲ್ಲಿ ಇರುವ ಜೊತೆಗೆ ಹಳ್ಳಿಗಳಲ್ಲೂ ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೊಂದಿಗೂ ಇರುವ ನನಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ಅವಕಾಶ ಕೊಡುತ್ತಾರೆ ಎನ್ನುವ ನಂಬಿಕೆ ಇದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಪ್ಪತ್ತು ವರ್ಷಗಳಿಂದ ವಿಧಾನಪರಿಷತ್ ಸದಸ್ಯ, ಶಾಸಕ, ಮಂತ್ರಿಯಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಜನ ಬೆಂಬಲ ಕೊಡುತ್ತಾರೆ. ಕೆಲಸ ಮಾಡಲು ಮತ್ತೆ ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಸಿರು ಶಾಲು ಹೊದ್ದು ನಾಮಪತ್ರ ಸಲ್ಲಿಸಿದ ಕುರಿತು ಮಾತನಾಡಿದ, ‘ಕೃಷಿಗೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆಂದು ಹಸಿರು ಶಾಲು ಹಾಕಿಲ್ಲ. ಪಕ್ಷದ ಕಿಸಾನ್ ಘಟಕದವರು ನಮ್ಮೊಂದಿಗೆ ಇದ್ದಾರೆ. ಅವರೇ ಹಸಿರು ಶಾಲು ಹಾಕಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದರು. ಹೀಗಾಗಿ, ಹಾಕಿದ್ದೆ’ ಎಂದು ತಿಳಿಸಿದರು.

‘4 ಬಾರಿ ಬಿಜೆಪಿಯವರನ್ನು ನೋಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ಹೊಸದಾಗಿ ಏನನ್ನಾದರೂ ಮಾಡಿ ತೋರಿಸುತ್ತೇವೆ. ಬಿಜೆಪಿ ಪರ ಅನುಕಂಪದ ಅಲೆ ಇದೆಯೋ, ಇಲ್ಲವೋ ಎನ್ನುವುದನ್ನು ಜನರು ಹೇಳಬೇಕು. ಚುನಾವಣೆಗಾಗಿ ತಿಂಗಳಿಂದಲೂ ತಂತ್ರ ರೂಪಿಸಿದ್ದೇವೆ. ಅದೇನು ಎನ್ನುವುದನ್ನು ಕಣದಲ್ಲೇ ಗೊತ್ತಾಗಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು