ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಮಲಪ್ರಭೆ; ಬಾಯಾರಿದ ಜನ

ಬಾವಿ, ಬೋರ್‌ವೆಲ್‌ ಮೊರೆಹೋದ ಪುರಸಭೆ ಅಧಿಕಾರಿಗಳು, ಹಳ್ಳಿಗಳ ಸ್ಥಿತಿ ಇನ್ನೂ ಗಂಭೀರ
Published 17 ಮಾರ್ಚ್ 2024, 4:44 IST
Last Updated 17 ಮಾರ್ಚ್ 2024, 4:44 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

6 ಕಿ.ಮೀ. ಅಂತರದಲ್ಲಿರುವ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿ ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಇದರೊಂದಿಗೆ ಜಲಮೂಲಗಳಾದ ಕೆರೆ, ಕೊಳವೆಬಾವಿ, ಬೋರ್‌ವೆಲ್‌ಗಳೂ ಬತ್ತುವ ಆತಂಕ ಎದುರಾಗಿದೆ.

ಕೊಳವೆ ಬಾವಿಗಳ ಒಪ್ಪಂದ: ನೀರಿನ ಸಮಸ್ಯೆ ಎದುರಿಸಬೇಕಾದ ಗ್ರಾಮಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಅಕ್ಕಪಕ್ಕದ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮಾಲೀಕರಿಂದ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಖಾಸಗಿ ಕೊಳವೆ ಬಾವಿಗಳ ನೀರಿನ ಪ್ರಮಾಣ ಮತ್ತು ಬೇಡಿಕೆ ಆಧಾರದ ಮೇಲೆ ಸರ್ಕಾರ ನಿಗದಿಪಡಿಸಿದ ಬಾಡಿಗೆ ನೀಡುವ ಒಪ್ಪಂದದ ಮೇರೆಗೆ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಸಮಸ್ಯಾತ್ಮಕ ಗ್ರಾಮಗಳು: ಬುಡರಕಟ್ಟಿ, ಚಿಕ್ಕಬಾಗೇವಾಡಿ, ಕಿತ್ತೂರು, ಹೂಲಿಕಟ್ಟಿ ಗ್ರಾಮಗಳಲ್ಲಿ ನದಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಿಹಾಳ ಕೆ.ಎಸ್., ಆನಿಗೋಳ, ನಯಾನಗರ (ಚಿಕ್ಕಮೂಳಕೂರ), ಜಕ್ಕ ನಾಯಕನಕೊಪ್ಪ, ಲಕ್ಕುಂಡಿ, ಯರಗುದ್ದಿ, ಹೊಸಕೋಟಿ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬುಡರಕಟ್ಟಿ, ಬಿದರಡ್ಡಿ, ಕೆಂಗಾನೂರ, ಜಾಲಿಕೊಪ್ಪ, ಅರವಳ್ಳಿ, ಲಿಂಗದಳ್ಳಿ, ಸಂಗೊಳ್ಳಿ, ಗರ್ಜೂರ, ಗುಡೂರ, ಖೋದಾನಪುರ, ಹೊಸಕೋಟಿ, ಪಟ್ಟಿಹಾಳ ಕೆ.ಬಿ., ಹಿರೇಬೆಳ್ಳಿಕಟ್ಟಿ, ಕುಡಸಗಟ್ಟಿ, ಮೇಟ್ಯಾಳ, ಗೊರವನಕೊಪ್ಪ, ಚಿಕ್ಕಬೆಳ್ಳಿಕಟ್ಟಿ, ಗುಡಿಕಟ್ಟಿ, ನನಗುಂಡಿಕೊಪ್ಪ, ಸಿದ್ದಸಮುದ್ರ, ಚಿಕ್ಕಬಾಗೇವಾಡಿ, ಗಿರಿಯಾಲ ಕೆ.ಬಿ., ಬೆಣಚಿನಮರಡಿ, ಗದ್ದಿಕರವಿನಕೊಪ್ಪ, ಮರಡಿನಾಗಲಾಪುರ ಗ್ರಾಮದಲ್ಲಿ ಕೊಳವೆಬಾವಿ ಗುರುತಿಸಿ ಒಪ್ಪಂದ ಮಾಡಿಕೊಂಡು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

34 ಗ್ರಾಮ ಪಂಚಾಯಿತಿಗಳಲ್ಲಿ ಕ್ರಮ: 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 210 ಖಾಸಗಿ ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಪ್ಪಂದ ಮಾಡಿಕೊಂಡು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. 145 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 10 ಘಟಕಗಳು ಮಾತ್ರ ನಿರುಪಯುಕ್ತವಾಗಿವೆ. ಶೇ 90ರಷ್ಟು ಘಟಕಗಳು ಚಾಲ್ತಿಯಲ್ಲಿವೆ. ಒಟ್ಟಾರೆ ಏಪ್ರಿಲ್ ತಿಂಗಳು ಅಂತ್ಯ ಕಾಣುವಷ್ಟರಲ್ಲಿ ಮಳೆ ಬಾರದೆ ಹೋದರೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜಲಕ್ಷಾಮ ಉಂಟಾಗಲಿದೆ ಎನ್ನುತ್ತಾರೆ ಜನ.

ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದಲ್ಲಿ ಬತ್ತಿರುವ ಬೋರ್‌ವೆಲ್
ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದಲ್ಲಿ ಬತ್ತಿರುವ ಬೋರ್‌ವೆಲ್
ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದ ಬಸವೇಶ್ವರ ನಗರದಲ್ಲಿ ಬೋರ್‌ವೆಲ್‌ನಿಂದ ನೀರು ಸಂಗ್ರಹಿಸಿದ ಜನ
ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದ ಬಸವೇಶ್ವರ ನಗರದಲ್ಲಿ ಬೋರ್‌ವೆಲ್‌ನಿಂದ ನೀರು ಸಂಗ್ರಹಿಸಿದ ಜನ
ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದ ಬಳಿ ಮಲಪ್ರಭೆಯ ನೋಟ
ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದ ಬಳಿ ಮಲಪ್ರಭೆಯ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT