ಹಳೇ ಸೇತುವೆ ಮೇಲೆ ನಾಲ್ಕು ಐದು ಅಡಿಯಷ್ಟು ನೀರು ಹರಿಯುತ್ತಿದ್ದು ಪಕ್ಕದಲ್ಲಿದ್ದ ಜಾನಕಿರಾಮ ದೇವಸ್ಥಾನ ಜಲಾವೃತವಾಗಿದೆ. ನವೀಲು ತೀರ್ಥ ಅಣೆಕಟ್ಟೆ ಒಟ್ಟು 2079.50 ಅಡಿ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಅಣೆಕಟ್ಟೆಯಲ್ಲಿ 2078.10 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು ಹೆಚ್ಚಿರುವ ಕಾರಣ ಮಲಪ್ರಭಾ ನದಿಗೆ 10 ಸಾವಿರ ಕ್ಯುಸೆಕ್ ನೀರು ಬಿಡುವುದಾಗಿ ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.