ಶನಿವಾರ, ಜನವರಿ 22, 2022
16 °C

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ಮದ್ರಾಸ್ ರೆಜಿಮೆಂಟ್‌ನ 263ನೇ ರೈಸಿಂಗ್ ಡೇ ಅಂಗವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿರುವವರು ತಾಲ್ಲೂಕಿನ ಪಂತನಗರದ ಮೂಲಕ ಪ್ರಯಾಣಿಸಿದರು.

ನೆ.17ರಂದು ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ಉದ್ಘಾಟಿಸಿದ ರ‍್ಯಾಲಿಯ ನೇತೃತ್ವವನ್ನು ಮೇಜರ್ ಹರೀಶ್ ಬೋರಾ ವಹಿಸಿದ್ದಾರೆ. 

ತಂಡವನ್ನು ಬೆಳಗಾವಿಯ ನೋಡಲ್ ಅಧಿಕಾರಿ ಸಣ್ಣಯಲ್ಲಪ್ಪ ತಳವಾರ, ಕ್ಯಾಪ್ಟನ್ ಡಿ.ಬಿ. ರಜಪೂತ್, ಕಾಡಪ್ಪ ಸಂಸುದ್ದಿ ಹಾಗೂ ಪಂತ ನಗರದ ಗ್ರಾಮಸ್ಥರು ಹಾಗೂ ಜಿಲ್ಲೆಯ ಮಾಜಿ ಸೈನಿಕರು ಸ್ವಾಗತಿಸಿದರು.

ಇದೇ ವೇಳೆ, ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು