ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಜಿಲ್ಲೆಯಲ್ಲಿ ಹೆಚ್ಚಿದ ಚಳಿ: ಸೋಂಕಿನ ಕಿರಿಕಿರಿ

12.6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ಕನಿಷ್ಠ ತಾಪಮಾನ * ಡಿ.6ರಿಂದ ಇನ್ನೂ ಹೆಚ್ಚಲಿದೆ ಥಂಡಿ
Published : 2 ಡಿಸೆಂಬರ್ 2024, 4:54 IST
Last Updated : 2 ಡಿಸೆಂಬರ್ 2024, 4:54 IST
ಫಾಲೋ ಮಾಡಿ
Comments
ಬೆಳಗಾವಿಯಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಚಹಾ ಹೀರುತ್ತ ಬೆಂಕಿ ಮುಂದೆ ನಿಂತ ಯುವಕರು –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಚಹಾ ಹೀರುತ್ತ ಬೆಂಕಿ ಮುಂದೆ ನಿಂತ ಯುವಕರು –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಚಳಿಯಿಂದಾಗಿ ಆಟೊ ಚಾಲಕರ ಗುಂಪು ಮೈತುಂಬ ಉಣ್ಣೆ ಬಟ್ಟೆಗಳನ್ನು ಧರಿಸಿ ಹರಟೆಯಲ್ಲಿ ನಿರತರಾಗಿದ್ದು ಹೀಗೆ –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಚಳಿಯಿಂದಾಗಿ ಆಟೊ ಚಾಲಕರ ಗುಂಪು ಮೈತುಂಬ ಉಣ್ಣೆ ಬಟ್ಟೆಗಳನ್ನು ಧರಿಸಿ ಹರಟೆಯಲ್ಲಿ ನಿರತರಾಗಿದ್ದು ಹೀಗೆ –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಜಿಲ್ಲೆಯಲ್ಲಿ ನಿರಂತರವಾಗಿ ಕೆಮ್ಮು ಶೀತ ಜ್ವರದ ಪ್ರಕರಣಗಳು ಕಂಡುಬರುತ್ತಿವೆ. ಆದರೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸರಿಯಾಗಿ ಜಾಗೃತಿ ಮೂಡಿಸುತ್ತಿಲ್ಲ
ಮಲ್ಲಿಕಾರ್ಜುನ ಶಿರೂರ ಯರಗಟ್ಟಿ ನಿವಾಸಿ
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಚಿಕಿತ್ಸೆಗೆ ಇಡೀ ದಿನ ಕಾಯಬೇಕಾದ ಸ್ಥಿತಿ ಇದೆ
ಸುವರ್ಣಾ ಹಿರೇಮಠ ಸದಾಶಿವ ನಗರ ನಿವಾಸಿ
ಈ ಬಾರಿ ಮುಂಗಾರು ಸಮಯದಲ್ಲಿ ಅತಿವೃಷ್ಟಿಯಾಗಿದೆ. ಹಿಂಗಾರು ಕೂಡ ಉತ್ತಮವಾಗಿದೆ. ಇದರಿಂದ 10 ದಿನ ಮುಂಚಿತವಾಗಿಯೇ ತಾಪಮಾನ ಕುಸಿದಿದೆ. ಜನ ಬೆಚ್ಚಗಿರಬೇಕು
ಜಿ.ಬಿ.ವಿಶ್ವನಾಥ ವಿಜ್ಞಾನಿ ಐಸಿಎಆರ್–ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ
ವೈದ್ಯರ ಸಲಹೆ ಏನು..?
‘ಚಳಿಗಾಲದಲ್ಲಿ ವೈರಾಣುಗಳು ಕ್ರಿಯಾಶೀಲವಾಗುತ್ತವೆ. ಸಹಜವಾಗಿಯೇ ಕೆಮ್ಮು ಶೀತ ಜ್ವರ ಫ್ಲೂ ಸೇರಿದಂತೆ ಶ್ವಾಸಕೋಶ ಸಂಬಂಧಿ ಹಲವು ಕಾಯಿಲೆಗಳು ಬರುತ್ತವೆ. ಇದರಿಂದ ಪಾರಾಗಲು ಜನರು ಯಾವಾಗಲೂ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಕಾಯಿಲೆ ಬಂದ ಮೇಲೆ ಔಷಧೋಪಚಾರ ಮಾಡಿಕೊಳ್ಳುವ ಬದಲು ಮುಂಚಿತವಾಗಿಯೇ ಎಚ್ಚರಿಕೆ ವಹಿಸಬೇಕು’ ಎಂದು ಮಾಧವಬಾಗ್‌ನ ಆಯುರ್ವೇದ ವೈದ್ಯೆ ಸುಮಲತಾ ನಂದಿಕೋಲಮಠ ಸಲಹೆ ನೀಡಿದ್ದಾರೆ. ‘ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಬಿಸಿಯಾದ ಊಟ ನೀರು ಬಳಸಬೇಕು. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಬೇಕು. ಚಿಕ್ಕ ಮಕ್ಕಳು ಹಾಗೂ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಬೇಗ ಸೋಂಕಿಗೆ ಒಳಗಾಗುತ್ತಾರೆ. ಅಂಥವರ ಬಗ್ಗೆ ಕಾಳಜಿ ವಹಿಸಬೇಕು. ಆಯಾ ಕಾಲಕ್ಕೆ ತಕ್ಕಂತೆ ಲಸಿಕೆಗಳೂ ಇವೆ. ಅಗತ್ಯವಿದ್ದವರು ಮುಂಜಾಗ್ರತೆಯಿಂದ ಲಸಿಕೆ ಪಡೆದುಕೊಳ್ಳಬೇಕು’ ಎಂದೂ ಅವರು ತಿಳಿಸಿದ್ದಾರೆ. ‘ಆಲೋಪಥಿಗಿಂತ ಆಯುರ್ವೇದದಲ್ಲಿ ಹೆಚ್ಚಿನ ಮದ್ದುಗಳಿವೆ. ವಿಶೇಷವಾಗಿ ಮನೆ ಮದ್ದು ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಂಚಿತವಾಗಿ ವೈದ್ಯರ ಸಲಹೆ ಪಡೆಯಿರಿ’ ಎಂದೂ ಅವರು ಹೇಳಿದ್ದಾರೆ.
ಹೆಚ್ಚಿದ ಸೋಂಕಿತರ ಸಂಖ್ಯೆ
‘ಜಿಲ್ಲೆಯಲ್ಲಿ ಕಾಲರಾ ಕೋವಿಡ್‌ ಅಥವಾ ಗಂಭೀರ ಸೋಂಕಿನ ಲಕ್ಷಣಗಳು ಈವರೆಗೆ ಕಂಡುಬಂದಿಲ್ಲ. ಪ್ರತಿದಿನ ಶಂಕಿತರ ತಪಾಸಣೆ ನಡೆದಿದೆ. ಜಿಲ್ಲೆಯ ಯುವತಿಯೊಬ್ಬರು ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಡೆಂಗಿಯಿಂದ ಸತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ ಅವರು ಜಿಲ್ಲಾಸ್ಪತ್ರೆಗೆ ಬಂದಿರಲಿಲ್ಲ’ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ‘ಬಿಮ್ಸ್‌ ಜಿಲ್ಲಾ ಆಸ್ಪತ್ರೆ ಕೆಎಲ್‌ಇಎಸ್‌ ಆಸ್ಪತ್ರೆ ಡಯಾಗ್ನಾಸ್ಟಿಕ್‌ ಸೆಂಟರ್‌ ಸೇರಿ ನಾಲ್ಕು ವಿಆರ್‌ಡಿಎಲ್‌ (ವೈರಸ್‌ ರಿಸರ್ಜ್ ಅಂಡ್‌ ಡಯಾಗ್ನಸ್ಟಿಕ್‌ ಲ್ಯಾಬ್‌) ಪ್ರಯೋಗಾಲಯಗಳು ಇವೆ. ವೈರಾಣು ಪರೀಕ್ಷೆ ನಿರಂತರವಾಗಿ ಸಾಗಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT