ಮೂಡಲಗಿ: ‘ಬೆಳೆಯ ಸಿರಿ ಮೊಳಕೆಯಲ್ಲಿ ನೋಡು’ ಎನ್ನುವಂತೆ ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಬಳೋಬಾಳ ಗ್ರಾಮದ 9 ವರ್ಷದ ಪೋರಿ ಪೂಣಂ ಕಂಬಾರ ನೂರಕ್ಕೂ ಅಧಿಕ ಯೋಗಾಸನಗಳನ್ನು ಸಲಿಸಾಗಿ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಲಿಖಿರಾಸನ, ಪದ್ಮವೃಚ್ಛಿಕಾಸನ, ಹಸ್ತಮುಕ್ತ ವೃಚ್ಛಕಾಸನ, ವಾಮದೇವಾಸನಗಳಂತ ಕಠಿಣ ಆಸನಗಳನ್ನು ಸಹ ಸುಲಭವಾಗಿ ಮಾಡುತ್ತಾಳೆ. ಸದ್ಯ ಬಳೋಬಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಮೊದಲನೇ ತರಗತಿಗೆ ಪ್ರವೇಶ ಪಡೆದಾಗ, ಶಾಲೆಯಲ್ಲಿ ಮಕ್ಕಳು ಯೋಗಾಸನ ಮಾಡುವುದನ್ನು ನೋಡಿ ಪ್ರಭಾವಿತಳಾದ ಪೂಣಂ ಯೋಗಾಸನ ರೂಢಿಸಿಕೊಂಡಿದ್ದಾಳೆ.

‘ಕಳೆದ ಮೂರ ವರ್ಷಗಳಿಂದ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ಯೋಗಾಸನದಲ್ಲಿ ತಾಲೀಮು ಮಾಡುತ್ತಿರುವ ಪೂಣಂಗೆ ಯೋಗಾದಲ್ಲಿ ಬಹಳಷ್ಟು ಆಸಕ್ತಿ ಇದೆ’ ಎನ್ನುತ್ತಾರೆ ತರಬೇತಿ ನೀಡುವ ದೈಹಿಕ ಶಿಕ್ಷಕ ಬಸಪ್ಪ ಬಡವಣ್ಣಿ.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆಯ ವಿವಿಧ ಸ್ಪರ್ಧೆಗಳಲ್ಲಿ ಯೋಗ ಪ್ರದರ್ಶಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ. ತಂದೆ ಆನಂದ ಮತ್ತು ತಾಯಿ ಶ್ರೀದೇವಿ ಅವರು ಪೂಣಂಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.