ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ: ವಿದ್ಯುತ್ ತಗುಲಿ ಯುವಕ ಸಾವು

Published 20 ಮೇ 2024, 15:52 IST
Last Updated 20 ಮೇ 2024, 15:52 IST
ಅಕ್ಷರ ಗಾತ್ರ

ಗೋಕಾಕ: ತಾಲ್ಲೂಕಿನ ಹಿರೇನಂದಿ ಗ್ರಾಮದ ಕೃಷಿಭೂಮಿಯಲ್ಲಿ ಶನಿವಾರ ಸ್ನಾನ ಮಾಡಲು ಬಾವಿಗೆ ಇಳಿದಿದ್ದ ಯುವಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕನಂದಿಯ ಮುತ್ತೆಪ್ಪ ರುದ್ರಪ್ಪ ಹರಿಜನ(24) ಮೃತರು. ಹಿರೇನಂದಿಯಲ್ಲಿ ನಡೆದ ದುರ್ಗಾದೇವಿ ಜಾತ್ರೆಗೆ ಬಂದಿದ್ದ ಅವರು, ಬಿಸಿಲಿನ ಧಗೆ ತಾಳಲಾರದೆ ಸ್ನಾನಕ್ಕಾಗಿ ಬಾವಿಗೆ ಇಳಿದಾಗ ಅವಘಢ ಸಂಭವಿಸಿದೆ.
ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹10 ಲಕ್ಷ ಕಳವು

ಗೋಕಾಕ: ತಾಲ್ಲೂಕಿನ ಕೊಣ್ಣೂರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಡಲೆ ವ್ಯಾಪಾರ ಮಾಡುತ್ತಿದ್ದ ವರ್ತಕರೊಬ್ಬರು ₹10 ಲಕ್ಷ ಇರಿಸಿದ್ದ ಬ್ಯಾಗ್ ಕಳ್ಳತನವಾಗಿದೆ. ಈ ಸಂಬಂಧ ತಮಿಳುನಾಡಿನ ಸೇಲಂ ಜಿಲ್ಲೆಯ ಮೊಹಮ್ಮದ್‌ ಶಮಸುಲ್ಲಾ ಹನೀಫ್ ಅವರು, ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT