ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ಹೋದ ಸೇತುವೆ ದುರಸ್ಥಿಗೆ ಒತ್ತಾಯ

Last Updated 22 ಅಕ್ಟೋಬರ್ 2017, 4:07 IST
ಅಕ್ಷರ ಗಾತ್ರ

ಮೋಳೆ: ಎರಡು ವಾರಗಳಿಂದ ಸುರಿದ ಭಾರಿ ಮಳೆ ನೀರಿಗೆ ಅಥಣಿ ತಾಲ್ಲೂಕು ಮೋಳೆ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಕಿರು ಸೇತುವೆ ಕೊಚ್ಚಿ ಹೋಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

‘ಈ ಮೊದಲು ಸೇತುವೆಯ ಕೆಲ ಭಾಗ ಕೊಚ್ಚಿ ಹೋಗಿತ್ತು. ಆದರೆ ಈಗ ಮತ್ತಷ್ಟು ಭಾಗ ಕೊಚ್ಚಿ ಹೋಗಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮೋಳೆ ಗ್ರಾಮದ ಬಹುತೇಕ ರೈತರು ತೋಟದ ವಸತಿಗಳಲ್ಲಿಯೇ ವಾಸವಾಗಿದ್ದಾರೆ. ಜನರು, ವಿದ್ಯಾರ್ಥಿಗಳು, ವೃದ್ದರು ಈಗ ಈ ಮಾರ್ಗವಾಗಿ ತಂಗಡಿ, ಸಿನಾಳ ಗ್ರಾಮಗಳಿಗೆ ಹೋಗದಂತಾಗಿದೆ’ ಶೀಘ್ರವೇ ಸೇತುವೆ ದುರಸ್ಥಿಗೊಳಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಹಳೇಮನಿ ದೂರಿದರು.

‘ಈ ಸೇತುವೆ ಮೂಲಕ ಮೋಳೆ, ತಂಗಡಿ, ಸಿನಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಎಂಟು ದಿನಗಳ ಹಿಂದೆ ಸಂಕೋನಹಟ್ಟಿ ಗ್ರಾಮದ ಯುವಕನೊಬ್ಬ ಇದೇ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಬೈಕ್ ಜತೆಗೆ ಕೊಚ್ಚಿ  ಹೋಗಿದ್ದನು.

ಮುಂದಿನ ವಾರ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿವೆ. ಕಬ್ಬು ಸಾಗಾಟಕ್ಕೂ ತೊಂದರೆಯಾಗಿದೆ  ದುರಸ್ಥಿ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು’ ಎಂದು ಮುಖಂಡರಾದ ಸೋಮನಾಥ ಬರಮಒಡೆಯರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT