ಚಿಕ್ಕೋಡಿ: ತಾಲ್ಲೂಕಿನಲ್ಲಿ ಕೋಟಿ–ಕೋಟಿ ಹಣ ನುಂಗಿರುವ ಯೋಜನೆ ಗಳಿಂದಲೇ ನಿಯಮಿತವಾಗಿ ನೀರು ಸರಬರಾಜು ಆಗುತ್ತಿಲ್ಲ. ಈಗ ಮತ್ತೇ ಹೊಸ ಯೋಜನೆಗಳಿಗೆ ಕೋಟ್ಯಂತರ ದುಡ್ಡು ಸುರಿಯಲಾಗುತ್ತಿದೆ. ಅವೂ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ ಮಳೆಯಾಶ್ರಿತ ಪ್ರದೇಶದ ಜನರು ಟ್ಯಾಂಕರ್ ನೀರೇ ಗತಿಯಾಗಿದೆ.

ತಾಲ್ಲೂಕಿನಲ್ಲಿ ನಾಯಿಂಗ್ಲಜ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೋಥಳಿವಾಡಿಗೆ ನೀರು ಸರಬರಾಜು ಆಗುತ್ತಿಲ್ಲ. ಹಾಗೂ ಅಂಕಲಿ ಮತ್ತು ಇತರ ಮೂರು ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆ ಯಡಿ ಕಾಡಾಪುರ, ಕೇರೂರ, ಜೋಡ ಕುರಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ತಾಲ್ಲೂಕಿನಲ್ಲಿ ಇನ್ನುಳಿದ ಕೆಲವು ಯೋಜನೆಗಳಿಂದಲೂ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ನೀರು ನೀಡಲಾಗುತ್ತಿದೆ. ಹೀಗಾಗಿ ಕೋಟ್ಯಂತರ ದುಡ್ಡು ವ್ಯಯಿಸಿ ಅನುಷ್ಠಾನಗೊಳಿಸಿರುವ ಈ ಯೋಜನೆ ಗಳಿಂದ ಜನರಿಗೆ ನಿಯಮಿತವಾಗಿ ಕುಡಿಯಲು ನೀರು ಸಿಗುತ್ತಿಲ್ಲ.

ಯಾಕಿಷ್ಟು ವಿಳಂಬ?: ತಾಲ್ಲೂಕಿನ ಜೈನಾಪುರ ಮತ್ತು ಇತರ 11 ಗ್ರಾಮ ಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ರೂ 14.10 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳ ಲಾಗಿದ್ದು, ಐದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕೃಷ್ಣಾ ನದಿಯಿಂದ ತಾಲ್ಲೂಕಿನ ತೋರಣಹಳ್ಳಿ, ಜೈನಾಪುರ, ಬಿದರಳ್ಳಿ, ಹತ್ತರವಾಟ, ಮಾಂಗನೂರ, ವಡ್ರಾಳ, ಮಜಲಟ್ಟಿ, ಖಜಗೌಡನಟ್ಟಿ, ಮುಗಳಿ, ಕಮತ್ಯಾನಟ್ಟಿ, ಬೆಣ್ಣಿಹಳ್ಳಿ ಮತ್ತು ಚನ್ಯಾನದಡ್ಡಿ ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಈ ಯೋಜ ನೆಗೆ 2009ರಲ್ಲಿ ಚಾಲನೆ ನೀಡಲಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕಿತ್ತು. ಆದರೆ ಇನ್ನೂ ಯೋಜನೆ ಪ್ರಾಯೋಗಿಕ ಹಂತದಲ್ಲೇ ಇದೆ.

ತಾಲ್ಲೂಕಿನಲ್ಲಿ ಈಗ ಮತ್ತೇ ಏಳು ಬಹುಗ್ರಾಮ ಕುಡಿಯುವ ನೀರು ಸರಬ ರಾಜು ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ರೂ 2.99 ಕೋಟಿ ವೆಚ್ಚದ ಬೇಡಕಿಹಾಳ ಮತ್ತು ಶಮನೇವಾಡಿ ಹಾಗೂ ರೂ 3.15 ಕೋಟಿ ವೆಚ್ಚದ ಪಾಂಗೇರಿ ಎ ಮತ್ತು ರಾಮಪುರ ಗ್ರಾಮ ಗಳ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪೂರ್ಣ ಗೊಂಡಿದ್ದರೆ, ರೂ 6.17 ಕೋಟಿ ವೆಚ್ಚದ ಶೆಂಡೂರ ಮತ್ತು 8 ಗ್ರಾಮಗಳ ಕುಡಿವ ಕಾಮಗಾರಿ ಪ್ರಗತಿಯಲ್ಲಿದೆ.

ರೂ 6.44 ಕೋಟಿ ವೆಚ್ಚದ ಜತ್ರಾಟ ಮತ್ತು ಇತರ 3 ಗ್ರಾಮಗಳಿಗೆ, ರೂ 16.50 ಕೋಟಿ ವೆಚ್ಚದ ಕಬ್ಬೂರ ಮತ್ತು ಇತರ 8 ಗ್ರಾಮಗಳಿಗೆ ಹಾಗೂ ರೂ 11.80 ಕೋಟಿ ವೆಚ್ಚದ ನಾಗರಮುನ್ನೋಳಿ ಮತ್ತು ಇತರ 11 ಗ್ರಾಮಗಳಿಗೆ ಬಹುಗ್ರಾಮ ಕುಡಿ ಯುವ ನೀರು ಸರಬರಾಜು ಯೋಜನೆ ಕಾಮ ಗಾರಿಗೆ ಟೆಂಡರ್ ಕರೆಯಲಾಗಿದೆ. ರೂ 5.85 ಕೋಟಿ ವೆಚ್ಚದಲ್ಲಿ ಹಿರೇಕೋಡಿ ಮತ್ತು ಬಸವನಾಳಗಡ್ಡೆ ಗ್ರಾಮಗಳಿಗೆ ಕುಡಿವ ನೀರು ಸೌಕರ್ಯ ಕಲ್ಪಿಸಲು ಉದ್ದೇಶಿಸಿ ರುವ ಯೋಜನೆ ಕಾಮಗಾರಿಗೆ 6 ನೇ ಬಾರಿ ಟೆಂಡರ್ ಕರೆಯಲಾಗಿದೆ. ಈ ಯೋಜನೆಗಳಿಂದಾದರೂ ನಿಯಮಿತ ವಾಗಿ ನೀರು ಸರಬರಾಜು ಮಾಡಲು ಸಾಧ್ಯವೇ? ಎಂಬ ಸಂಶಯ ಜನರಲ್ಲಿ ಮೂಡುತ್ತಿದೆ.

ಟ್ಯಾಂಕರ್ ನೀರೇ ಗತಿ: ತಾಲ್ಲೂಕಿನ ಚಿಕ್ಕೋಡಿ ರೋಡ್, ಮೀರಾಪುರಹಟ್ಟಿ, ಬೆಳಕೂಡ ಗ್ರಾಮ ಹಾಗೂ ತೋಟಪಟ್ಟಿ ಗಳು, ಕರಗಾಂವ, ಬಂಬಲವಾಡ, ಕುಂಗ ಟೊಳ್ಳಿ, ಬೆಣ್ಣಿಹಳ್ಳಿ, ಶೆಂಡೂರ, ಯರ ನಾಳ, ಗವಾನ, ಉಮರಾಣಿ, ಇಟ್ನಾಳ ಹಾಗೂ ಬೆಳಗಲಿ ಗ್ರಾಮಗಳಿಗೆ ನಿತ್ಯವೂ 14 ಟ್ರಕ್ಗಳ ಮೂಲಕ 37 ಟ್ರಿಫ್ ನೀರು ಸರಬರಾಜು ಮಾಡಲಾಗುತ್ತಿದೆ.

‘ಕುಡಿವ ನೀರಿನ ಯೋಜನೆಗೂ ಸಮಿತಿ ರಚಿಸಿ’
ಶಿರಗಾಂವ ಹಾಗೂ ಇತರ 7 ಗ್ರಾಮಗಳ ಕುಡಿಯುವ ನೀರು ಸರಬ ರಾಜು ಯೋಜನೆ ಸಮ ರ್ಪಕ ನಿರ್ವಹ ಣೆಗೆ ಸಮಿತಿ ಯೊಂದನ್ನು ರಚಿಸಿಕೊಂಡಿದ್ದೆವೆ. ಆ ಮೂಲಕ ಎಲ್ಲ ಗ್ರಾಮಗಳಿಗೆ ನಿಯಮಿತವಾಗಿ ನೀರು ಸರಬ ರಾಜು ವ್ಯವಸ್ಥೆ ಕೈಗೊಂಡಿದ್ದೆವೆ.

ಅದೇ ಮಾದರಿಯಲ್ಲಿ ನಾಯಿಂಗ್ಲಜ್ ಬಹುಗ್ರಾಮ ಕುಡಿ ಯುವ ನೀರಿನ ಯೋಜ ನೆಗೂ ಸಮಿತಿ ರಚಿಸಬೇಕು. ಈಗ ಕೋಥಳಿ ಗ್ರಾ.ಪಂ.ವ್ಯಾಪ್ತಿಯ ಕೋಥಳಿವಾಡಿಗೆ ಆ ಯೋಜನೆ ಯಿಂದ ನೀರು ಸರಬರಾಜು ಆಗುತ್ತಿಲ್ಲ. ಅನಿಲ ದಡ್ಡೆ, ಅದ್ಯಕ್ಷರು, ಗ್ರಾಮ ಪಂಚಾಯ್ತಿ ಕೋಥಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.