ಬೆಳಗಾವಿ: ವೈದ್ಯರ ಅಚಾತುರ್ಯದಿಂದ ಗೃಹಿಣಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಗಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಹಿಳೆಯು ಹಾಸಿಗೆ ಹಿಡಿದಿದ್ದರಿಂದ ಇಡಿ ಕುಟುಂಬವೇ ಅತಂತ್ರ ಸ್ಥಿತಿ ಎದುರಿಸಬೇಕಾಗಿದೆ.

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗದ ಕಾರಣ ಚಿಕ್ಕೋಡಿ ತಾಲ್ಲೂಕಿನ ವಾಳಕಿ ಗ್ರಾಮದ ಮಹಾದೇವಿ ಸುಭಾಷ ಸೂರ್ಯವಂಶಿ (35) ಎಂಬುವರು ಗೃಹಿಣಿಯು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ.

`ಇದೇ 10ನೇ ಫೆಬ್ರುವರಿ 2013ರಂದು ಮಾಂಜರಿಯ ಖಾಸಗಿ ಆಸ್ಪತ್ರೆಯಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತೆರಳಿದ್ದರು. ಕಳೆದ ಮಾರ್ಚ್ 26 ರಂದು ಮೊದಲ ಬಾರಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗದ ಕಾರಣ ಏಪ್ರಿಲ್ 17 ರಂದು ಮತ್ತೆ ಅದೇ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ಗರ್ಭಕೋಶದ ಬದಲು ಮತ್ತೊಂದು ಅಂಗಾಂಗವನ್ನು ಕತ್ತರಿಸಲಾಗಿದೆ' ಎಂದು ಮಹಾದೇವಿ ಅವರ ಸಹೋದರ ರಾಜು ಕಾಂಬಳೆ `ಪ್ರಜಾವಾಣಿ'ಗೆ ತಿಳಿಸಿದರು.

`ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿದ ಮರುದಿವಸ ದಿಂದಲೇ ಮಹಾದೇವಿ ಸೇವಿಸಿದ ಆಹಾರವೆಲ್ಲ ಹೊರ ಬರಲು ಪ್ರಾರಂಭಿಸಿತು. ಆಗ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರನ್ನು ಸಂಪರ್ಕಿಸಿದೆವು. ಮಿರಜ್ನಲ್ಲಿ ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ತಿಳಿಸಿದರು. ಸ್ಕ್ಯಾನಿಂಗ್ ನಂತರ ಅನ್ನನಾಳವನ್ನು ಕತ್ತರಿಸಿರುವುದು ಗೊತ್ತಾಯಿತು' ಎಂದು ರಾಜು ಹೇಳಿದರು.

`ಸ್ಕ್ಯಾನಿಂಗ್ ನಂತರ ವೈದ್ಯರನ್ನು ಸಂಪರ್ಕಿಸಿದಾಗ ಮಹಿಳೆಯ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದೆ. ಕೂಡಲೇ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದರು. ಅದರಂತೆ ಏಪ್ರಿಲ್ 23 ರಂದು ಮಹಾದೇವಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಇಲ್ಲಿಯೂ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಜೂನ್ 19 ರಂದು ಮರಳಿ ಮನೆಗೆ ಕರೆದುಕೊಂಡು ಹೋಗಿದ್ದೇವೆ' ಎಂದು ಕಾಂಬಳೆ ಮೊಬೈಲ್ ಕರೆ ಮೂಲಕ `ಪ್ರಜಾವಾಣಿ'ಗೆ ತಿಳಿಸಿದರು.

ಅತಂತ್ರ ಸ್ಥಿತಿಯಲ್ಲಿ ಕುಟುಂಬ: ಮಹಾದೇವಿ ಅವರ ಪತಿ ಸುಭಾಷ ಅಂಗವಿಕಲರಾಗಿದ್ದು, ಕಾಯಿಪಲ್ಲೆ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ, ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ಮಹಾದೇವಿ ಅವರೇ ನಿಭಾಯಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಪುತ್ರರಿದ್ದು, ಸದ್ಯ ಕುಟುಂಬದ ಪರಿಸ್ಥಿತಿ ಹದಗೆಟ್ಟಿದೆ. ಈಗ ಗೃಹಿಣಿಯು ಚಿಂತಾಜನಕ ಸ್ಥಿತಿಯಲ್ಲಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

`ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಣ್ಣ ಕರಳಿನಲ್ಲಿ ಗಾಯ ಕಂಡುಬಂದು, ದೇಹದಲ್ಲಿ ನಂಜೇರಿತ್ತು. ಎರಡು ತಿಂಗಳವರೆಗೆ ಚಿಕಿತ್ಸೆ ನೀಡಿದರು ಗುಣಮುಖರಾಗಲಿಲ್ಲ. ಎಲ್ಲ ಪ್ರಯತ್ನ ಮಾಡಿದೆವು. ಮಹಾದೇವಿ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಇದೇ ಜೂನ್ 13 ರಂದು ಇಲಿಯಾಸ್ಟಮಿ (ಸಣ್ಣ ಕರಳು) ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ, ಅವರು ಸ್ಪಂದಿಸಲಿಲ್ಲ. ದೇಹದ ತುಂಬೆಲ್ಲ ನಂಜು ಏರಿದ್ದರಿಂದ ಅಂಗಾಂಗಗಳ ವೈಫಲ್ಯ ಕಂಡುಬಂದಿತು. ಹೆಚ್ಚಿನ ಚಿಕಿತ್ಸೆ ನೀಡಬೇಕೆನ್ನುವಷ್ಟರಲ್ಲಿಯೇ ಅವರ ಕುಟುಂಬದವರು ಮನೆಗೆ ಕರೆದುಕೊಂಡು ಹೋದರು' ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಎಸ್.ಟಿ. ಕಳಸದ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.