ಬೆಳಗಾವಿ: ಮಂಗಳೂರು ಮೂಲದ ಶಾಂತಿ ಪ್ರಕಾಶನದ ರಜತ ಮಹೋತ್ಸ ವದ ಅಂಗವಾಗಿ ‘ಶಾಂತಿಗಾಗಿ ಸಾಹಿತ್ಯ’ ಬೃಹತ್ ಪುಸ್ತಕ ಮೇಳ ಹಾಗೂ ‘ವಿಜನ್ ಎಕ್ಸ್‌ಪೋ’ವನ್ನು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಿಸೆಂಬರ್ 10ರಿಂದ 15ರವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ.

‘ದೇಶದಲ್ಲಿನ ಪ್ರತಿಯೊಬ್ಬರೂ ಇನ್ನೊಂದು ಧರ್ಮವನ್ನು ಅರಿತುಕೊಳ್ಳ ಬೇಕು. ಇಲ್ಲದಿದ್ದರೆ ಪರಸ್ಪರರ ನಡುವೆ ವೈಮನಸ್ಸು ಬೆಳೆಯುತ್ತ ಹೋಗುತ್ತದೆ. ಎಲ್ಲ ಧರ್ಮಿಯರು ಪರಸ್ಪರ ಅರಿತು ಕೊಂಡು ಕೂಡಿ ಕೆಲಸ ಮಾಡಿದರೆ ದೇಶವು ಪ್ರಗತಿ ಪಥದಲ್ಲಿ ಮುನ್ನಡೆ ಯಲು ಸಾಧ್ಯ. ಹೀಗಾಗಿ ಧರ್ಮ ಗ್ರಂಥ ಗಳಲ್ಲಿರುವ ಸಂದೇಶಗಳನ್ನು ಗ್ರಂಥಗಳ ಮೂಲಕ ಜನರಿಗೆ ತಲು ಪಿಸುವ ಮೂಲಕ ಅವರು ಸರಿಯಾದ ಮಾರ್ಗ ದಲ್ಲಿ ನಡೆಯುವಂತೆ ಮಾಡುವ ಉದ್ದೇಶದಿಂದ ‘ಶಾಂತಿಗಾಗಿ ಸಾಹಿತ್ಯ’ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾ ಗಿದೆ’ ಎಂದು ಶಾಂತಿ ಪ್ರಕಾಶನ ರಜತ ಮಹೋತ್ಸವದ ಸಂಚಾಲಕ ಶಾಹೀದ್ ಮೇಮನ್ ಅವರು ಭಾನುವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕೀಯ ಉದ್ದೇಶಗಳಿಗಾಗಿ ಕನ್ನಡಿಗರು–ಮರಾಠಿಗರ ನಡುವೆ; ಹಿಂದೂ–ಮುಸ್ಲಿಂ ನಡುವೆ ವೈಮನಸ್ಸು ಮೂಡಿಸುವ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಿವೆ. ಆದರೆ, ಇಂಥ ಚಟುವಟಿಕೆಗಳಿಂದ ನಾವು ದೂರವಿದ್ದು, ಯುವ ಪೀಳಿಗೆ ಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಕೆಲಸ ವನ್ನು ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಡಿ. 10ರಂದು ಬೆಳಿಗ್ಗೆ 11 ಗಂಟೆಗೆ ಪುಸ್ತಕ ಮೇಳವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ ಹಾಗೂ ‘ಎಕ್ಸ್‌ಪೋ ವಿಜನ್’ ಅನ್ನು ಶೇಖ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷ ಅಬು ಶೇಖ್ ಉದ್ಘಾಟಿಸಲಿದ್ದಾರೆ. ಡಿ. 14ರಂದು ಸಂಜೆ 6.30ಕ್ಕೆ ‘ಶಾಂತಿಗಾಗಿ ಸಾಹಿತ್ಯ’ ವಿಚಾರ ಗೋಷ್ಠಿ ನಡೆಯ ಲಿದ್ದು, ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್, ಶಾಂತಿ ಪ್ರಕಾಶ ನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಮೇಮನ್ ತಿಳಿಸಿದರು.

‘ಭ್ರಷ್ಟಾಚಾರ, ಅಪ್ರಮಾಣಿಕತೆ, ಸ್ತ್ರೀ ಶೋಷಣೆ, ಕೋಮುವಾದ, ಪರಿಸರ ಅಸಮತೋಲನ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಮತ್ತು ಪರಿಹಾ ರದ ಕುರಿತು ‘ಎಕ್ಸ್‌ಪೋ ವಿಜನ್’ ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ಬೆಳಕು ಚೆಲ್ಲಲಾಗುವುದು’ ಎಂದರು.

ಶಾಂತಿ ಪ್ರಕಾಶನದ ಸದಸ್ಯ ಅಬ್ದುಲ್ ಗಪೂರ್, ‘ಸಂಸ್ಥೆಯು ಕಳೆದ 25 ವರ್ಷಗಳಿಂದ ಇಸ್ಲಾಂ ಧರ್ಮದ ಕುರಿತ ಗ್ರಂಥಗಳನ್ನು ವಿವಿಧ ಭಾಷೆ ಗಳಲ್ಲಿ ಪ್ರಕಾಶಿಸುತ್ತಿದೆ. ಮಹಮ್ಮದ್ ಪೈಗಂಬರರ ಜೀವನ, ಸಂದೇಶಗಳನ್ನು ಜನರ ಬಳಿಗೆ ತಲುಪಿಸಲಾಗುತ್ತಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ 250 ಗ್ರಂಥಗಳನ್ನು ಕನ್ನಡದಲ್ಲಿ ಪ್ರಕಾ ಶಿಸಲಾಗಿದ್ದು, ಅವುಗಳನ್ನು ಇಲ್ಲಿ ಪ್ರದ ರ್ಶಿಸಲಾಗುತ್ತಿದೆ. ಜೊತೆಗೆ ಇಗ್ಲಿಷ್, ಹಿಂದಿ, ಮರಾಠಿ ಹಾಗೂ ಉರ್ದು ಭಾಷೆಗಳಲ್ಲೂ ಪುಸ್ತಕಗಳು ಇಲ್ಲಿ ಸಿಗಲಿದೆ’ ಎಂದು ತಿಳಿಸಿದರು.

‘ಇಸ್ಲಾಂ ಧರ್ಮದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಹೀಗಾಗಿ ಎಲ್ಲ ಧರ್ಮಿಯರ ನಡುವೆ ಕೋಮು ಸೌಹಾರ್ದತೆ, ಮನಸ್ಸು ಬೆಸೆಯುವ ಉದ್ದೇಶದಿಂದ ಈ ಪ್ರದರ್ಶನ ಹಮ್ಮಿ ಕೊಳ್ಳಲಾಗಿದೆ’ ಎಂದು ವಿವರಿಸಿದರು.
ಜಮಾತ್– ಎ– ಇಸ್ಲಾಮಿ ಹಿಂದ್‌ನ ಅಧ್ಯಕ್ಷ ರಿಯಾಜ್ ಅಹ್ಮದ್ ಅವಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.