ಶನಿವಾರ, ಆಗಸ್ಟ್ 24, 2019
28 °C

ಪ್ರವಾಹದಿಂದ 430 ಹೆಕ್ಟೇರ್ ಬೆಳೆ ಜಲಾವೃತ, ಕುಸಿದ 40 ಮನೆಗಳು

Published:
Updated:
Prajavani

ಹೊಸಪೇಟೆ: ಒಂದೆಡೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೆ, ಇನ್ನೊಂದೆಡೆ ನದಿಯಲ್ಲಿ ಬಂದ ಪ್ರವಾಹದಿಂದ ಹೂವಿನಹಡಗಲಿ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ 430 ಹೆಕ್ಟೇರ್‌ಗೂ ಅಧಿಕ ಬೆಳೆ ಜಲಾವೃತಗೊಂಡು, 40 ಮನೆಗಳಿಗೆ ಕುಸಿದಿವೆ.

ಅಂಗೂರು ಗ್ರಾಮದಲ್ಲಿ ಎಂಟು ಮನೆಗಳಿಗೆ ನೀರು ನುಗ್ಗಿದೆ. ಕುರುವತ್ತಿಯ ತಗ್ಗು ಪ್ರದೇಶದಲ್ಲಿರುವ ನಾಲ್ಕು ಕುಟುಂಬಗಳನ್ನು ಅಧಿಕಾರಿಗಳು ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದಾರೆ.

ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿದ್ದು, ಶುಕ್ರವಾರ 1,42,114 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. 60.72 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ. ಗುರುವಾರ 48 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಒಂದೇ ದಿನಕ್ಕೆ 12 ಟಿ.ಎಂ.ಸಿ. ಅಡಿಗೂ ಹೆಚ್ಚು ನೀರು ಬಂದಿದೆ. ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ನದಿಗೆ ನೀರು ಹರಿಸಲು ಚಿಂತನೆ ನಡೆದಿದ್ದು, ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಲಾಗಿದೆ.

Post Comments (+)