ಪಿಎಚ್‌.ಡಿ ಪ್ರವೇಶ ಪರೀಕ್ಷೆ ಬರೆದ 85ರ ಅಜ್ಜ

7

ಪಿಎಚ್‌.ಡಿ ಪ್ರವೇಶ ಪರೀಕ್ಷೆ ಬರೆದ 85ರ ಅಜ್ಜ

Published:
Updated:
Deccan Herald

ಹೊಸಪೇಟೆ: ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 85 ವರ್ಷದ ಕೊಪ್ಪಳದ ಬಿಸರಹಳ್ಳಿ ಶರಣಬಸಪ್ಪ ಅವರು ಪಿಎಚ್‌.ಡಿ. ಪ್ರವೇಶ ಪರೀಕ್ಷೆ ಬರೆದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಹಿಂದಿನ ವರ್ಷ ಕೂಡ ಶರಣಬಸಪ್ಪ ಪರೀಕ್ಷೆ ಬರೆದಿದ್ದರು. ಆದರೆ, ಆಯ್ಕೆಯಾಗಿರಲಿಲ್ಲ. ಛಲಬಿಡದೆ ಈ ಸಲ ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾರೆ ಪ್ರೌಢಶಾಲೆ ನಿವೃತ್ತ ಶಿಕ್ಷಕರಾಗಿರುವ ಅವರಿಗೆ ಸಾಹಿತ್ಯದಲ್ಲಿ ಸಂಶೋಧನೆ ಮಾಡಬೇಕೆಂಬ ಬಯಕೆ.

‘ಶಿಕ್ಷಕನಿದ್ದಾಗ ಪಿಎಚ್‌.ಡಿ. ಮಾಡುವ ಆಸೆ ಇತ್ತು. ಆದರೆ, ಅದು ಕೈಗೂಡಿರಲಿಲ್ಲ. ಈಗ ಮಾಡುವ ಆಸೆ ಇದೆ. ಅದಕ್ಕಾಗಿಯೇ ಪರೀಕ್ಷೆ ಬರೆದಿದ್ದೆನೆ’ ಎಂದು ತಿಳಿಸಿದರು.

ವಿವಿಧ ವಿಭಾಗಗಳಲ್ಲಿ ಪಿಎಚ್‌.ಡಿ.ಗಾಗಿ ನಡೆದ ಪ್ರವೇಶ ಪರೀಕ್ಷೆಗೆ ಒಟ್ಟು 500 ವಿದ್ಯಾರ್ಥಿಗಳು ಹಾಜರಾಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !