ಭಾನುವಾರ, ಜುಲೈ 3, 2022
23 °C

ಬೈಕ್‌ಗೆ ಕಾರು ಡಿಕ್ಕಿ; ಬೈಕ್ ಸವಾರ ಸಾವು; ಹೆದ್ದಾರಿ ತಡೆದು ಸ್ಥಳೀಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನಹೊಸಹಳ್ಳಿ: ಸಮೀಪದ ಎಂ.ಬಿ.ಅಯ್ಯನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಸ್ತೆ  ದಾಟುವಾಗ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಮೃತಪಟ್ಟಿದ್ದಾರೆ.

ಎಂ.ಬಿ.ಅಯ್ಯನಹಳ್ಳಿಯ ಶಿವಪ್ರಸಾದ್ (52) ಮೃತ, ಎಕ್ಸ್ ಎಲ್ ಬೈಕ್ ನಲ್ಲಿ ಹೆದ್ದಾರಿ ದಾಟುವ ಸಂದರ್ಭದಲ್ಲಿ ಹೊಸಪೇಟೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಸ್ಥಳೀಯರು ಕೆಲ ಕಾಲ ಹೆದ್ದಾರಿ ತಡೆದು ಅಂಡರ್ ಪಾಸ್, ನಿರ್ಮಿಸುವಂತೆ ಒತ್ತಾಯಿಸಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಕೆಲವೊತ್ತು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. 

ಸ್ಥಳಕ್ಕೆ ತಹಶೀಲ್ದಾರ್ ಜಗದೀಶ, ಡಿಎಸ್ಪಿ ಹರೀಶ್ ರೆಡ್ಡಿ, ಕೊಟ್ಟೂರು ಸಿಪಿಐ ಸೋಮಶೇಖರ ಕೆಂಚರೆಡ್ಡಿ ಭೇಟಿ ನೀಡಿ ಪ್ರತಿಭಟನ‌ ಕಾರರನ್ನು ಮನವೊಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು