ಭಾನುವಾರ, ಆಗಸ್ಟ್ 1, 2021
26 °C

ಹೊಸಪೇಟೆ: ಮೃತ ಚಾಲಕನ ಕುಟುಂಬಕ್ಕೆ ₹3 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಅನಾರೋಗ್ಯದಿಂದ ಮೃತಪಟ್ಟಿರುವ ಸಂಡೂರು ಘಟಕದ ಚಾಲಕ/ನಿರ್ವಾಹಕ ಕೆ. ಬಸವರಾಜ (56) ಅವರ ಪತ್ನಿ ಅಕ್ಕಮಹಾದೇವಿ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಶುಕ್ರವಾರ ₹3 ಲಕ್ಷ ಮೊತ್ತದ ಪರಿಹಾರದ ಚೆಕ್‌ ವಿತರಿಸಿದರು.

‘ಸಂಸ್ಥೆಯ ನಿಯಮದ ಪ್ರಕಾರ, ಸಿಬ್ಬಂದಿ ಮೃತರಾದಲ್ಲಿ ಅವರ ಅವಲಂಬಿತರಿಗೆ ಆಂತರಿಕ ಗುಂಪು ವಿಮಾ ಯೋಜನೆಯ ಅಡಿಯಲ್ಲಿ ₹3 ಲಕ್ಷ ಪರಿಹಾರ ನೀಡಲಾಗುತ್ತದೆ. ಅದರಂತೆ ಬಸವರಾಜ ಅವರ ಪತ್ನಿ ಅಕ್ಕಮಹಾದೇವಿ ಅವರಿಗೆ ಪರಿಹಾರದ ಚೆಕ್‌ ನೀಡಲಾಗಿದೆ’ ಎಂದು ಶೀನಯ್ಯ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಮಿಕ ಕಲ್ಯಾಣ ಅಧಿಕಾರಿ ಎಚ್‌. ಚಂದ್ರಶೇಖರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು