ಶನಿವಾರ, ಜುಲೈ 31, 2021
25 °C

‘ಕೋವಿಡ್‌ ಮೃತರ ಮಾಹಿತಿ ಹಂಚಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌ನಿಂದ ಮೃತರಾದ ಕುಟುಂಬದವರಿಗೆ ಸಹಾಯಹಸ್ತ ಚಾಚಲು ಕೆಪಿಸಿಸಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ ನಗರದಲ್ಲಿ ಮಂಗಳವಾರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪೂರ್ವಭಾವಿ ಸಭೆ ಜರುಗಿತು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಕೋವಿಡ್‌ನಿಂದ ಹೊಸಪೇಟೆ ಸೇರಿದಂತೆ ರಾಜ್ಯದಾದ್ಯಂತ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಬಿಜೆಪಿ ಸರ್ಕಾರ ಅಂತಹವರ ಸೂಕ್ತ ಮಾಹಿತಿ ನೀಡುತ್ತಿಲ್ಲ. ಮೃತರ ಕುಟುಂಬಗಳಿಗೆ ಪರಿಹಾರ ನೀಡದೆ ಕಾಲಹರಣ ಮಾಡುತ್ತಿದೆ’ ಎಂದು ಟೀಕಿಸಿದರು.

‘ಕೋವಿಡ್‌ನಿಂದ ಅನೇಕರು ಅವರ ಸಂಬಂಧಿಕರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಅಂತಹವರಿಗೆ ಸರ್ಕಾರ ನೆರವು ನೀಡಬೇಕಿತ್ತು. ಆದರೆ, ಆ ಕೆಲಸ ಮಾಡಿರಲಿಲ್ಲ. ಈಗ ಪಕ್ಷದ ವತಿಯಿಂದ ಮೃತರ ಮಾಹಿತಿ ಕಲೆ ಹಾಕಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದಾಗ ಅವರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಕಮಲಾಪುರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಿ.ಸೋಮಪ್ಪ, ಮುಖಂಡರಾದ ಗುಜ್ಜಲ್ ನಾಗರಾಜ, ನಿಂಬಗಲ್ ರಾಮಕೃಷ್ಣ, ಚಿದಾನಂದಪ್ಪ, ವೆಂಕಟರಮಣ, ಎಸ್.ಬಿ. ಮಂಜುನಾಥ, ಜಿ.ರಘು, ತೇಜಾ ನಾಯ್ಕ್, ಭರತ ಕುಮಾರ್, ವಿಜಯಕುಮಾರ್, ನವಾಜ್, ಗಣೇಶ, ತಾಜುದೀನ್, ಅಣ್ಣಾಮಲೈ, ಯಂಕಪ್ಪ, ಕೆ.ಗೌಸ್, ಬೆಲ್ಲದ್ ರೌಫ್, ವಿನಯ ಶೆಟ್ಟರ್, ತಿಮ್ಮಪ್ಪ ಯಾದವ್, ಮುನ್ನಿ ಕಾಸಿಂ, ಮಾಬುನ್ನಿ, ನನ್ನೆಬಿ, ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.