ಕಾಂಗ್ರೆಸ್‌ನಿಂದ ಕರಾಳ ದಿನ, ಪ್ರತಿಭಟನೆ

7

ಕಾಂಗ್ರೆಸ್‌ನಿಂದ ಕರಾಳ ದಿನ, ಪ್ರತಿಭಟನೆ

Published:
Updated:
Deccan Herald

ಹೊಸಪೇಟೆ: ನೋಟು ಅಮಾನ್ಯೀಕರಣಗೊಳಿಸಿ ಎರಡು ವರ್ಷ ಪೂರೈಸಿದ ಪ್ರಯುಕ್ತ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನಿಂದ ಶುಕ್ರವಾರ ನಗರದಲ್ಲಿ ಕರಾಳ ದಿನ ಆಚರಿಸಲಾಯಿತು.

ನಗರದ ರೋಟರಿ ವೃತ್ತದಲ್ಲಿ ಕರಾಳ ದಿನ ಆಚರಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ನಗರದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಬಳಿಕ ಮಾತನಾಡಿದ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ‘ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ಅನೇಕ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮುಚ್ಚಿವೆ. ಲಕ್ಷಾಂತರ ಜನ ಕೆಲಸ ಕಳೆದುಕೊಂಡರು. ನೋಟು ಬದಲಿಸಿಕೊಳ್ಳಲು ಬ್ಯಾಂಕಿನ ಎದುರು ಸಾಲಿನಲ್ಲಿ ನಿಂತು ಅನೇಕರು ಜೀವ ಕಳೆದುಕೊಂಡರು’ ಎಂದು ಟೀಕಿಸಿದರು.

‘ಕಪ್ಪು ಹಣದ ಹೆಸರಿನಲ್ಲಿ ₹500 ಹಾಗೂ ₹1,000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದರಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಒಂದು ನಯಾ ಪೈಸೆ ಕೂಡ ಕಪ್ಪು ಹಣ ತಂದಿಲ್ಲ. ಎಲ್ಲ ಹಳೆಯ ನೋಟುಗಳು ಬ್ಯಾಂಕಿಗೆ ವಾಪಸ್‌ ಬಂದಿವೆ. ದೂರದೃಷ್ಟಿ ಇಲ್ಲದೆ ಕೈಗೊಂಡ ನಿರ್ಧಾರದಿಂದ ದೇಶ ಅನೇಕ ವರ್ಷ ಹಿಂದಕ್ಕೆ ಹೋಗಿದೆ’ ಎಂದು ಜರಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅಮಾಜಿ ಹೇಮಣ್ಣ, ಟಿಂಕರ್‌ ರಫೀಕ್‌, ಮುಖಂಡರಾದ ಎಲ್‌. ಸಿದ್ದನಗೌಡ, ಗುಜ್ಜಲ್‌ ನಾಗರಾಜ್‌, ಸಿ.ಆರ್‌. ಹನುಮಂತ, ಏಕಾಂಬರೇಶ್‌, ಸೋಮಲಿಂಗಪ್ಪ, ಮೊಹಮ್ಮದ್‌ ಇಮಾಮ್‌ ನಿಯಾಜಿ, ಭಾಗ್ಯಲಕ್ಷ್ಮಿ ಭರಾಡೆ, ಫಹೀಮ್‌ ಬಾಷಾ, ಲಿಯಾಕತ್‌ ಅಲಿ, ಬಡಾವಲಿ, ಲಕ್ಷ್ಮಿದೇವಿ, ಆಜಾದ್‌, ಕೆ. ರಾಧಾ, ಲಕ್ಷ್ಮಿ, ಕೆರೋಲಿನಾ, ಬೀನಾ, ರೂಪಾ, ಶಮಾ, ಇಂದುಮತಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !